Please assign a menu to the primary menu location under menu

Health & Fitness

ಅವ್ನಿ ಉತ್ಪನ್ನಗಳು ದಕ್ಷಿಣ ಭಾರತದಲ್ಲಿ ಪ್ರತೀ ತಿಂಗಳು 25% ಬೆಳವಣಿಗೆ ದಾಖಲಿಸಿದೆ ಕರ್ನಾಟಕದಿಂದ ಬ್ರಾಂಡ್ 34% ಏರಿಕೆಗೆ ಸಾಕ್ಷಿಯಾಗಿದೆ


ಸಂಪೂರ್ಣ ಋತುಚಕ್ರ ಆರೈಕೆಯ ಸ್ಟಾರ್ಟ್ ಅಪ್ ಆಗಿರುವ ಅವ್ನಿ, ಋತುಚಕ್ರದ ಅಭ್ಯಾಸಗಳಿಗೆ ಸಂಬಂಧಿಸಿದ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು, ದಕ್ಷಿಣ ಭಾರತದಲ್ಲಿ ಅತ್ಯದ್ಭುತ ಪ್ರತಿಕ್ರಿಯೆ ಪಡೆದಿದೆ. ಎಲ್ಲಾ ಆರ್ಡರ್ ಗಳ 55% ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಯಶಸ್ವಿಯಾಗಿ ದಾಖಲಿಸಿದೆ.

ಬ್ರಾಂಡ್ ನ ಸೂಕ್ಷ್ಮಾಣುನಿರೋಧಕ ತೊಳೆಯಬಹುದಾದ ಬಟ್ಟೆಯ ಪ್ಯಾಡ್ ಗಳು ರಾಸಾಯನಿಕ ಆಧಾರಿತ ವಾಣಿಜ್ಯ ಸ್ಯಾನಿಟರಿ ಪ್ಯಾಡ್ ಗಳಿಂದ ಚರ್ಮಕ್ಕೆ ಸೂಕ್ಷ್ಮತೆಯ ಸಮಸ್ಯೆ ಅನುಭವಿಸುತ್ತಿದ್ದ ಮಹಿಳೆಯರಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜೊತೆಗೆ, ಹೊಸ ಜವಾಬ್ದಾರಿಯುತ ಬಳಸಿ ಎಸೆಯಬಹುದಾದ ಮತ್ತು ಪರಿಸರ ಸ್ನೇಹಿ ವಿಧ ನೈರ್ಮಲ್ಯದ ಅಭ್ಯಾಸಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ದಕ್ಷಿಣ ಭಾರತದ ಗ್ರಾಹಕರ ಗಮನ ಸೆಳೆದಿದೆ.

“ನಾನು ಅತ್ಯಂತ ಪ್ರಸಿದ್ಧ ಬ್ರಾಂಡ್ ನ ವಾಣಿಜ್ಯ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದೆ. ಆದರೆ, ಈ ಬಳಸಿ ಎಸೆಯಬಹುದಾದ ಪ್ಯಾಡ್ ಗಳು ಸುಲಭವಲ್ಲ ಮತ್ತು ಪರಿಸರಕ್ಕೆ ಅಪಾಯಕಾರಿಯೂ ಹೌದು. ನಮ್ಮ ಮನೆಯಲ್ಲೂ, ಕುಟುಂಬ ಸದಸ್ಯರು ಪರಿಸರ ಹಾಗೂ ನೈರ್ಮಲ್ಯದ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿದ್ದಾರೆ. ನಾನು ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರ್ಮ್ ನಲ್ಲಿ ಅವ್ನಿ ಬಗ್ಗೆ ತಿಳಿದೆ ಮತ್ತು ಇದರ ಪರಿಕಲ್ಪನೆಯಿಂದ ಪ್ರಭಾವಿತಳಾದೆ. ಅವ್ನಿ ಬಟ್ಟೆಯ ಪ್ಯಾಡ್ ಗಳು ಅತ್ಯಂತ ಕೋಮಲ ಹಾಗೂ ಆರಾಮದಾಯಕವಾಗಿದೆ. ಒಟ್ಟಾರೆ ಇವು ಮಿತವ್ಯಯಕಾರಿಯಾಗಿದ್ದು ಎಲ್ಲಾ ಉದ್ದೇಶವನ್ನೂ ಪೂರೈಸುತ್ತಿದೆ” ಎಂದು ಚೆನ್ನೈನ ಗ್ರಾಹಕರಾದ, 31 ವರ್ಷದ ಪ್ರೀತಿ ಹೇಳಿದ್ದಾರೆ.

“ನನ್ನ ಚರ್ಮ ಅತ್ಯಂತ ಸೂಕ್ಷ್ಮಚರ್ಮ, ಮತ್ತು ನನಗೆ ತೊಡೆಸಂದಿಯಲ್ಲಿ ದದ್ದುಗಳಾಗುತ್ತಿತ್ತು. ರಾಸಾಯನಿಕ ಆಧಾರಿತ ಪ್ಯಾಡ್ ಗಳಿಂದ ಋತುಚಕ್ರದ ಅವಧಿಯಲ್ಲಿ ಇದು ಮತ್ತಷ್ಟು ಹದಗೆಡುತ್ತಿತ್ತು. ನನ್ನ ಸ್ನೇಹಿತೆಯೊಬ್ಬರು ಅವ್ನಿ ಬಳಸುತ್ತಿದ್ದರು, ಅವರು ಈ ಉತ್ಪನ್ನಗಳನ್ನು ಬಳಸುವಂತೆ ನನಗೆ ಸಲಹೆ ನೀಡಿದರು. ಈಗ ಸಮಸ್ಯೆ ಮಾಯವಾಗಿದೆ ಮತ್ತು ಬಟ್ಟೆ ಆಧಾರಿತ ಪ್ಯಾಡ್ ಗಳಿಂದ ಋತುಚಕ್ರವನ್ನು ನಿರ್ವಹಿಸುವುದು ಅತ್ಯಂತ ಸುಲಭವಾಗಿದೆ. ಈ ಪ್ಯಾಡ್ ನ ಉತ್ತಮ ಅಂಶವೆಂದರೆ ಇದು ಹಗುರವಾಗಿದೆ, ತೊಳೆಯಲು ಸುಲಭ, ಮತ್ತು ಯಾವುದೇ ಕಲೆ ಉಳಿಯುವುದಿಲ್ಲ” ಎಂದು ಬೆಂಗಳೂರಿನ 36 ವರ್ಷದ ನಿರ್ಮಲಾ ಹೇಳಿದ್ದಾರೆ.

ಬಟ್ಟೆ ಆಧಾರಿತ ಮರುಬಳಕೆ ಮಾಡಬಹುದಾದ ಪ್ಯಾಡ್ ಗಳ ಪರಿಕಲ್ಪನೆ ಬ್ರಾಂಡ್ ನ ಜಾಗೃತಿ ಅಭಿಯಾನದಿಂದ ಉಂಟಾಗಿದೆ. ಪ್ರತಿಕ್ರಿಯೆಗಳನ್ನು ಅನುಸರಿಸಿ, ಬ್ರಾಂಡ್ ಉತ್ಪನ್ನದ ಪೋರ್ಟ್ ಫೋಲಿಯೋ ವಿಸ್ತರಿಸಿದ್ದು, ಇತ್ತೀಚೆಗಷ್ಟೇ ತನ್ನ ಕೊಡುಗೆಗಳ ಶ್ರೇಣಿಯಲ್ಲಿ ಪರಿಸರ ಸ್ನೇಹಿ ಪ್ಯಾಡ್ ವಾಶ್ ಗಳನ್ನು ಸೇರಿಸಿದೆ.

ಅವ್ನಿ ಕುರಿತು

ಮಹಾರಾಷ್ಟ್ರದ ಥಾಣೆಯಲ್ಲಿ 2020 ರಲ್ಲಿ ಆರಂಭವಾದ ಅವ್ನಿ, ಸಂಪೂರ್ಣ ಋತುಚಕ್ರದ ಆರೈಕೆಯ ಬಗ್ಗೆ ಕೇಂದ್ರೀಕರಿಸಿದ ಸ್ಟಾರ್ಟ್ ಅಪ್ ಆಗಿದೆ. ಸುಜಾತಾ ಪವಾರ್ ಮತ್ತು ಅಪೂರ್ವ ಅಗರ್ವಾಲ್ ದಂಪತಿಗಳಿಂದ ಸ್ಥಾಪನೆಯಾದ, ಅವ್ನಿ ಮಹಿಳೆಯರಿಗೆ ಪ್ರಜ್ಞಾಪೂರ್ವಕ ಋತುಚಕ್ರದ ಆರೈಕೆಯ ಉತ್ಪನ್ನಗಳನ್ನು ನೀಡುತ್ತಿದೆ. ಅತ್ಯುತ್ತಮ ಸಂಶೋಧನೆ, ನಾವೀನ್ಯತೆ, ಪರೀಕ್ಷಿಸಲ್ಪಟ್ಟ ಉತ್ಪನ್ನಗಳ ಮೂಲಕ ಬ್ರಾಂಡ್ ಋತುಸ್ರಾವದ ಅವಧಿಯಲ್ಲಿ ಮಹಿಳೆಯರ ನೈರ್ಮಲ್ಯಕ್ಕೆ ಆದ್ಯತೆ ನೀಡಿದೆ. ಅವ್ನಿ ವೈದ್ಯಕೀಯ ತಜ್ಞರು, 24×7 ಸಹಾಯವಾಣಿ, ಮತ್ತು ಋತುಚಕ್ರದ ಆರಂಭದಿಂದ ಋತುಬಂಧದವರೆಗೆ ಪ್ರಜ್ಞಾಪೂರ್ವಕ ಉತ್ಪನ್ನಗಳ ನೆರವಿನೊಂದಿಗೆ ಅವ್ನಿ ಮಹಿಳೆಯರ ವಿಶ್ವಾಸಾರ್ಹ ಆರೋಗ್ಯ ಬ್ರಾಂಡ್ ಆಗಿ ಉಗಮಿಸಬೇಕೆನ್ನುವುದು ಸಹ-ಸಂಸ್ಥಾಪಕರ ದೃಷ್ಟಿಕೋನವಾಗಿದೆ.


Leave a Reply

error: Content is protected !!