ಮುಂಬೈ: ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಕಂಠಕ್ಕೆ ಮನ ಸೋಲದವರೇ ಇಲ್ಲ. ಲಗಾನ್ ದಂತಹ ಸಿನಿಮಾದ ಕಥೆಯನ್ನ ಇದೇ ಬಚ್ಚನ್ ನೆರೇಟ್ ಮಾಡಿದ್ದರು. ಅದೇ ಬಚ್ಚನ್ ಸಾಹೇಬ್ ಈಗ ದಕ್ಷಿಣದ ‘ರಾಧೆ ಶ್ಯಾಮ್’ ಚಿತ್ರದ ಕಥೆಯನ್ನ ತಮ್ಮ ಅದ್ಭುತ ಕಂಠದಿಂದ ನಿರೂಪಿಸುತ್ತಿದ್ದಾರೆ.
ರಾಧಾ ಕೃಷ್ಣಕುಮಾರ್ ನಿರ್ದೇಶನದ ಈ ಚಿತ್ರ ಇದೇ ಮಾರ್ಚ್-11 ರಂದು ರಿಲೀಸ್ ಆಗುತ್ತಿದೆ. ಬಹು ನಿರೀಕ್ಷೆಯ ಈ ಚಿತ್ರವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ.