ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ನಿಲ ಬೆನಕೆರವರು ಮಾರುತಿ ನಗರ ಹಾಗೂ ಅಮನ ನಗರ ರಹವಾಸಿಗಳ ಸತತ 15 ವರ್ಷಗಳ ಸಮಸ್ಯೆಯನ್ನು ಬಗೆಹರಿಸುವಂತೆ ರಹವಾಸಿಗಳ ಬೇಡಿಕೆಯನ್ನು ಇಟ್ಟಿದ್ದರನ್ವಯ ನಾಲಾ ನಿರ್ಮಾಣ ಕಾಮಗಾರಿಯನ್ನು ಇಂದು ಶಾಸಕರ ಅನುದಾನದಡಿಯಲ್ಲಿನ ರೂ. 50 ಲಕ್ಷ ವೆಚ್ಚದಲ್ಲಿ ಭೂಮಿ ಪೂಜೆಯನ್ನು ಸಲ್ಲಿಸುವುದರ ಮೂಲಕ ನಾಲಾ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮಾರುತಿ ನಗರ ಹಾಗೂ ಅಮನ ನಗರ ರಹವಾಸಿಗಳ ಬಹುವರ್ಷಗಳ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರು. ಆದ್ದರಿಂದ ಅವರ ಬೇಡಿಕೆಯಾದ ನಾಲಾ ನಿರ್ಮಾಣ ಕಾಮಗಾರಿಯು ಯಾರ ಅವಧಿಯಲ್ಲಿಯೂ ಬಗೆಹರಿಯದ ಸಮಸ್ಯೆಯು ಇಂದು ನನ್ನ ಅವಧಿಯಲ್ಲಿ ಶಾಸಕರ ಅನುದಾನದಡಿಯಲ್ಲಿನ 50 ಲಕ್ಷಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಾರುತಿ ನಗರ 3ನೇ ಕ್ರಾಸನಿಂದ ಅಮನ ನಗರ 1ನೇ ಕ್ರಾಸವರೆಗೆ ನಾಲಾ ನಿರ್ಮಾಣವನ್ನು ಮಾಡಲಾಗುತ್ತಿದೆ ಎಂದು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸದಾನಂದ ಗುಂಟೆಪ್ಪನ್ನವರ (ಅಧ್ಯಕ್ಷರು ಬಿ.ಜೆ.ಪಿ. ಯುವಾ ಮೊರ್ಚಾ ಬೆಳಗಾವಿ ಉತ್ತರ), ಮಹಾಂತೇಶ ಹವಳಿ, ಉದಯ ಪದ್ಮನ್ನವರ, ರಮೇಶ ನಾಯ್ಕರ, ರಮೇಶ ತಹಶೀಲ್ದಾರ, ಮುತ್ತಲಮುರಿ, ಅಭಯ ಅನಗೋಳಕರ ಹಾಗೂ ಸ್ಥಳೀಯರು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.