Please assign a menu to the primary menu location under menu

Entertainment

BIG BREAKING: ಪಂಚಭೂತಗಳಲ್ಲಿ ಲೀನರಾದ ಪುನೀತ್; ಅಪ್ಪುಗೆ ಅಂತಿಮ ವಿದಾಯ, ಮಣ್ಣಲ್ಲಿ ಮಣ್ಣಾದ ಕನ್ನಡಿಗರ ಮನೆಮಗ

BIG BREAKING: ಪಂಚಭೂತಗಳಲ್ಲಿ ಲೀನರಾದ ಪುನೀತ್; ಅಪ್ಪುಗೆ ಅಂತಿಮ ವಿದಾಯ, ಮಣ್ಣಲ್ಲಿ ಮಣ್ಣಾದ ಕನ್ನಡಿಗರ ಮನೆಮಗ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದ್ದು, ಅಂತಿಮ ವಿಧಿವಿಧಾನಗಳನ್ನು ರಾಘವೇಂದ್ರ ರಾಜಕುಮಾರ್ ಪುತ್ರ ವಿನಯ್ ರಾಜಕುಮಾರ್ ನೆರವೇರಿಸಿದ್ದಾರೆ. ಈಡಿಗ ಸಂಪ್ರದಾಯದಂತೆ ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.

ಪಾರ್ಥಿವ ಶರೀರದ ಎದುರು ಪೊಲೀಸ್ ಬ್ಯಾಂಡ್ ನುಡಿಸಿ, ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದ ನಂತರ ಕುಟುಂಬದವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಾಗಿದೆ.

ಭಾನುವಾರ ಮುಂಜಾನೆ 4 ಗಂಟೆಗೆ ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರಿಗೆ ದರ್ಶನ ಅಂತ್ಯಗೊಳಿಸಿ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯಿತು. ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪುತ್ತಿದ್ದಂತೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಕುಟುಂಬದವರು, ಬಂಧುಗಳು ಪೂಜೆ ಸಲ್ಲಿಸಿದ ನಂತರ ತಂದೆ, ತಾಯಿ ಸಮಾಧಿ ಸಮೀಪದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾಜ್ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಪುನೀತ್ ರಾಜಕುಮಾರ್ ಪತ್ನಿ, ಪುತ್ರಿಯರು ಕಣ್ಣೀರಿಟ್ಟಿದ್ದಾರೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಕೊನೆಯ ಬಾರಿಗೆ ತಮ್ಮನನ್ನು ಕಣ್ತುಂಬಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಂಧು ಬಾಂಧವರು ಕೊನೆಯ ಬಾರಿ ಮುಖ ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಅಲ್ಲಿದ್ದವರ ಕಣ್ಣಾಲಿಗಳೆಲ್ಲಾ ಒದ್ದೆಯಾಗಿವೆ.


Leave a Reply

error: Content is protected !!