Crime News

ಅಂಬಿಗನಿಲ್ಲದ ದೋಣಿಯಂತಾಗಿದೆ ಬಿಜೆಪಿ ..!  

ಅಂಬಿಗನಿಲ್ಲದ ದೋಣಿಯಂತಾಗಿದೆ ಬಿಜೆಪಿ ..!  

ಬೆಂಗಳೂರು: ಅಂಬಿಗ ಇಲ್ಲದ ಬಿಜೆಪಿಯ ದೋಣಿ ಅಲುಗಾಡುತ್ತಿದೆ. ಬಿಜೆಪಿ ಮುಳುಗಬಹುದೇನೋ ಎನ್ನುವ ಭಯ ಬಿಜೆಪಿ ಶಾಸಕರಿಗೆ ಕಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯವಾಡಿದರು.

ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ, ವಿರೋದ ಪಕ್ಷದ ನಾಯಕನ ಅಯ್ಕೆ ಮಾಡುವ ಸಾಮರ್ಥ್ಯ ಬಿಜೆಪಿಗೆ ಇಲ್ಲ. ವಿಪಕ್ಷ ನಾಯಕನನ್ನು ಮುಖ್ಯಮಂತ್ರಿಗಳ ನೆರಳು ಎಂದು ಕರೆಯುತ್ತಾರೆ. ಆದರೆ, ರಾಜ್ಯದಲ್ಲಿ ವಿಪಕ್ಷ ನಾಯಕನನ್ನು ಅಯ್ಕೆ ಮಾಡದೆ ರಾಜ್ಯಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ.

ಬಿಜೆಪಿಪಕ್ಷದಲ್ಲಿ ಆಂತರಿಕ ಜಗಳ ಹೆಚ್ಚಾಗಿದ್ದು ನಮ್ಮ ಸರ್ಕಾರ 100 ದಿನಗಳತ್ತ ಕಾಲಿಡುತ್ತದ್ದರು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ಗೊಂದಲದಲ್ಲಿದ್ದಾರೆ. ಬಿಜೆಪಿ ಸಂಪೂರ್ಣ ಗೊಂದಲದಲ್ಲಿ ಒದ್ದಾಡುತಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಕೂಡಾ ಅದೇ ರೀತಿ ಮುಂದುವರಿದಿದೆ, ಎಂದು ಅವರು ಹೇಳಿದರು.

ಬೇರೆ ಪಕ್ಷಗಳಿಗೆ ಹೊಲಿಸಿದರೆ ನಮ್ಮ ಪಕ್ಷ ಜನಪರವಾಗಿದೆ. ಹಾಗಾಗಿ, ಬೇರೆ ಪಕ್ಷದ ಶಾಸಕರು ನಮ್ಮ ಪಕ್ಷಕ್ಕೆ ಬರುವ ಮನಸ್ಸು ಮಾಡಿರಬಹುದು ಎಂದರು. ಆದರೆ ನನಗೆ ಯಾರು ಬರ್ತಾರೆ ಎಷ್ಟುಜನ ಬರ್ತಾರೆ ಅನ್ನೊ ಮಾಹಿತಿ ಇಲ್ಲ. ನಮಗೇನು ಶಾಸಕರನ್ನು ನಮ್ಮ ಪಕ್ಷಕ್ಕೆ ಕರೆ ತರಬೇಕು ಎನ್ನುವ ಅವಶ್ಯಕತೆ ಕೂಡ ಇಲ್ಲ, ನಮ್ಮ ಸರ್ಕಾರ ಭದ್ರವಾಗಿದೆ. ಎಂದು ಸುದ್ದಿಗಾರರಿಗೆ ಸಚಿವ ಕೃಷ್ಣ ಬೈರೆಗೌಡ ತಿಳಿಸಿದರು.

ವರದಿಗಾರ

ಎ.ಚಿದಾನಂದ

Disclaimer: This Story is auto-aggregated by a Syndicated Feed and has not been Created or Edited By City Big News Staff.