Please assign a menu to the primary menu location under menu

State

BIG NEWS: ‘ಡಿಕೆಶಿ ಕಾಸು- ಸಿದ್ದರಾಮಯ್ಯ ಬಾಸು’; ಅಸಹಾಯಕ ಡಿ.ಕೆ.ಶಿ. ಎಂದು ವ್ಯಂಗ್ಯವಾಡಿದ ಬಿಜೆಪಿ

BIG NEWS: ‘ಡಿಕೆಶಿ ಕಾಸು- ಸಿದ್ದರಾಮಯ್ಯ ಬಾಸು’; ಅಸಹಾಯಕ ಡಿ.ಕೆ.ಶಿ. ಎಂದು ವ್ಯಂಗ್ಯವಾಡಿದ ಬಿಜೆಪಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಿಎಂ ಆಗುವ ಕನಸು ಕನಸಾಗಿಯೇ ಉಳಿಯುವಂತಿದೆ. ಸಿದ್ದರಾಮಯ್ಯ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ’ಅಸಹಾಯಕ ಡಿಕೆಶಿ’ Read more…

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಿಎಂ ಆಗುವ ಕನಸು ಕನಸಾಗಿಯೇ ಉಳಿಯುವಂತಿದೆ. ಸಿದ್ದರಾಮಯ್ಯ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ’ಅಸಹಾಯಕ ಡಿಕೆಶಿ’ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

’ಡಿಕೆಶಿ ಕಾಸು-ಸಿದ್ದರಾಮಯ್ಯ ಬಾಸು’ ಎಂಬಂತಾಗಿದೆ ರಾಜ್ಯ ಕಾಂಗ್ರೆಸ್ ಸ್ಥಿತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಸಾಗುತ್ತಿರುವ ಸಿದ್ದರಾಮಯ್ಯ, ಪರೋಕ್ಷವಾಗಿ ನಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಡಿ.ಕೆ.ಶಿ. ಅವರದ್ದು ಬರೀ ಕನಸೇ ಆಗಿದೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಲೇವಡಿ ಮಾಡಿದೆ.

ಸಿದ್ದರಾಮಯ್ಯ ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ಡಿಕೆಶಿ ಎಷ್ಟೇ ತಂತ್ರಗಾರಿಕೆ ನಡೆಸಿದರೂ ಪ್ರಯೋಜನವಿಲ್ಲ. ನಿಮ್ಮ ಮುಖ್ಯಮಂತ್ರಿ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಮಗಿದ್ದಾರೆ. ನಿಮ್ಮದೀಗ ’ಬಗಲ್ ಮೆ ದುಷ್ಮನ್’ ಪರಿಸ್ಥಿತಿ ಎಂದು ಟೀಕಿಸಿದೆ.

ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ, ಕಸೂತಿಗೆ 100 ಕೋಟಿ, ಅದಕ್ಕಿಷ್ಟು, ಇದಕ್ಕಿಷ್ಟು… ಸಂಪುಟದಲ್ಲಿ ಇಂತಿಂಥವರೇ ಇರುತ್ತಾರೆ. ಈ ರೀತಿ ಸಿದ್ದರಾಮಯ್ಯ ಸ್ವಯಂ ಘೋಷಣೆ ಮಾಡುತ್ತಲೇ ಇದ್ದಾರೆ. ಅಂದರೆ ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ಕಥೆಯೇನು ಡಿಕೆಶಿ? ಎಂದು ಪ್ರಶ್ನಿಸಿದೆ.


Leave a Reply

error: Content is protected !!