Entertainment News

ಸಿಲಿಕಾನ್ ಸಿಟಿ ಮಂದಿಯ ಚಿತ್ತ ಬಿಎಂಟಿಸಿ ಎತ್ತ

ಸಿಲಿಕಾನ್ ಸಿಟಿ ಮಂದಿಯ ಚಿತ್ತ ಬಿಎಂಟಿಸಿ ಎತ್ತ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ಗಳದೇ ಹವಾ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ಬಿಎಂಟಿಸಿ ಸಂಸ್ಥೆಯು ಎಲೆಕ್ಟ್ರಿಕ್ ಬಸ್ಗಳ ಸಂಚಾರದತ್ತ ಒಲವು ತೋರಿಸುತ್ತಿದೆ.

ಇನ್ನು ಎಲೆಕ್ಟ್ರಿಕ್ ಬಸ್ ಗಳಿಂದ ಬಿಎಂಟಿಸಿ ಸಂಸ್ಥೆಗೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿದು ಬರುತ್ತಿದೆ.

ಯಸೆ..ಡಿಸೇಲ್ ಬಸ್ ಖರೀದಿಯಿಂದ ಕೈಸುಟ್ಟಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ನತ್ತ ಚಿತ್ತ ಹರಿಸಿದೆ. ಹಂತ ಹಂತವಾಗಿ ನಗರದಲ್ಲಿ ನೂರಾರು ಬಸ್ ಗಳು ರೋಡಿಗೆ ಬರುತ್ತಿವೆ. ಆರಂಭದಲ್ಲಿ ಶಾಪವಾಗಿದ್ದ ಇಕೋ ಫ್ರೆಂಡ್ಲಿ ಎಲೆಕ್ಟ್ರಿಕ್ ಬಸ್ಗಳು ಇದೀಗ ನಿಗಮದ  ಪಾಲಿಗೆ ವರದಾನವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಮಯ ಮಾಡಲು ಬಿಎಂಟಿಸಿ ಮುಂದಾಗಿದೆ.

ಡೀಸೆಲ್ ಬಸ್ ಗಳಿಂದ ಕೋಟಿ ಕೋಟಿ ನಷ್ಟ ಕಾಣುತ್ತಿದ್ದ ಬಿಎಂಟಿಸಿ ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ಬಸ್ಗಳನ್ಬು ರಸ್ತೆಗಿಳಿಸ್ತಿದೆ. ಮೊದಲ ಹಂತದಲ್ಲಿ 90 ಹಾಗೂ ಎರಡನೇ ಬ್ಯಾಚ್ ನಲ್ಲಿ 300 ಬಸ್ಗಳನ್ನು ರಸ್ತೆಗಿಳಿಸಿದೆ. ಇದೀಗ ಮೂರನೇ ಬ್ಯಾಚಲ್ಲಿ 921 ಬಸ್ ಗಳು ರಸ್ತೆಗಿಳಿಯಲಿವೆ. ಮೊದಲ ಹಾಗೂ ಎರಡನೇ ಬ್ಯಾಚಲ್ಲಿ ಖರೀದಿಸಿರುವ ಬಸ್ಗಳು ಬಿಎಂಟಿಸಿ‌ ನಷ್ಟದ ಭಾರವನ್ನು ತಗ್ಗಿಸಿದೆ. ಹೀಗಾಗಿ ಮೂರನೇ ಬ್ಯಾಚಲ್ಲು ಅತೀ ಹೆಚ್ಚು ಬಸ್ಗಳನ್ನು ಖರೀದಿಸಲು ಬಿಎಂಟಿಸಿ ಹೆಜ್ಜೆ ಇಟ್ಟಿದೆ.

 

Disclaimer: This Story is auto-aggregated by a Syndicated Feed and has not been Created or Edited By City Big News Staff.