Please assign a menu to the primary menu location under menu

Sports

ಟೀಂ ಇಂಡಿಯಾ ಕ್ರಿಕೆಟಿಗರು ಆಯಾಸದಲ್ಲಿದ್ದಾರೆ ಎಂದ ಬೂಮ್ರಾ..!

ಟೀಂ ಇಂಡಿಯಾ ಕ್ರಿಕೆಟಿಗರು ಆಯಾಸದಲ್ಲಿದ್ದಾರೆ ಎಂದ ಬೂಮ್ರಾ..!

ನ್ಯೂಜಿಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಸೋಲಿನ ನಂತರ, ಭಾರತವು ಬಬಲ್ ಆಯಾಸದಿಂದ  ಬಳಲುತ್ತಿರುವುದಾಗಿ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಭಾರತವು ಬಬಲ್ ಆಯಾಸ, ಮಾನಸಿಕ ಆಯಾಸದ ವಿರುದ್ದ ಹೋರಾಡುತ್ತಿದೆ. ಇದರಿಂದ ಆಟಗಾರರು ಪರಿಣಾಮಗಳನ್ನು ಎದುರಿಸುತ್ತಿರುವುದಾಗಿ ಜಸ್ಪ್ರೀತ್ ಬುಮ್ರಾ ತಿಳಿಸಿದ್ದಾರೆ.

ಟಿ 20 ವಿಶ್ವಕಪ್‌ನಲ್ಲಿ ಭಾರತದ ಎರಡನೇ ಸತತ ಸೋಲಿನ ನಂತರ ಬೂಮ್ರಾ ಈ ಮಾತುಗಳನ್ನು ಹೇಳಿದ್ದಾರೆ. ಭಾನುವಾರ, ಸೂಪರ್ 12 ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್‌ಗಳಿಂದ ಸೋತ ನಂತರ ಭಾರತವು ಗುಂಪು 2 ರಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.

ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐಪಿಎಲ್ ಪುನರಾರಂಭಗೊಳ್ಳುವ ಮೊದಲು ಭಾರತವು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಟಿ-20 ವಿಶ್ವಕಪ್‌ಗೆ ಒಂದು ವಾರದ ಮೊದಲು ಮುಕ್ತಾಯಗೊಂಡ ಐಪಿಎಲ್ ಋತುವಿನ ನಂತರ ತಂಡವು ದಣಿದಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಕೆಲವೊಮ್ಮೆ ನಿಮಗೆ ವಿರಾಮ ಬೇಕಾಗುತ್ತದೆ ಎಂಬ ಮಾತುಗಳನ್ನು ಹೇಳಿದ್ದಾರೆ.


Leave a Reply

error: Content is protected !!