ಅಮೃತಸರ: ಪಾಕಿಸ್ತಾನದ ಡ್ರೋನ್ವೊಂದನ್ನು ಸೋಮವಾರ ಬೆಳಗಿನ ಜಾವ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧರು ಹೊಡೆದುರುಳಿಸಿದ್ದಾರೆ. ಪಂಜಾಬ್ನ ಫಿರೋಜ್ಪುರದಲ್ಲಿ ಈ ಘಟನೆ ನಡೆದಿದೆ.
ಪಾಕಿಸ್ತಾನದ ಕಡೆಯಿಂದ ಅನುಮಾನಾಸ್ಪದ ವಸ್ತುವೊಂದು ಗುನುಗುನಿಸುವ ಶಬ್ದ ಕೇಳಿದೊಡನೆ ಜಾಗೃತರಾದ ಯೋಧರು, ತಕ್ಷಣವೇ ಅದನ್ನು ಹೊಡೆದುರುಳಿಸಿದರು ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಹೊಡೆದುರುಳಿಸಿರುವ ಡ್ರೋನ್ ಡಿಜೆಐ ಮ್ಯಾಟ್ರಿಸ್ 300 ಆರ್ಟಿಎಕ್ಸ್ ಮಾಡೆಲ್ನದ್ದು. ಡ್ರೋನ್ನಲ್ಲಿ ಜೋಡಿಸಲಾಗಿದ್ದ ಸಣ್ಣ ಹಸಿರು ಬಣ್ಣದ ಚೀಲದಲ್ಲಿ 5 ಪ್ಯಾಕೆಟ್ಗಳಲ್ಲಿ ಅಮಲುಪದಾರ್ಥಗಳನ್ನು ತುಂಬಿಡಲಾಗಿತ್ತು. ಈ ಪದಾರ್ಥಗಳು 4.17 ಕೆ.ಜಿ ತೂಕವಿತ್ತು. ಅವುಗಳನ್ನೂ ಬಿಎಸ್ಎಫ್ ವಶಪಡಿಸಿಕೊಂಡಿದೆ.