Please assign a menu to the primary menu location under menu

National

ಕಾಂಗ್ರೆಸ್​ ಪಕ್ಷಕ್ಕೆ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅಧಿಕೃತ ರಾಜೀನಾಮೆ; ರಾಜೀನಾಮೆ ಪತ್ರದುದ್ದಕ್ಕೂ ಸಿಧು ವಿರುದ್ಧ ಆಕ್ರೋಶ

ಕಾಂಗ್ರೆಸ್​ ಪಕ್ಷಕ್ಕೆ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅಧಿಕೃತ ರಾಜೀನಾಮೆ; ರಾಜೀನಾಮೆ ಪತ್ರದುದ್ದಕ್ಕೂ ಸಿಧು ವಿರುದ್ಧ ಆಕ್ರೋಶ

ಪಂಜಾಬ್​ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್​ ಪಕ್ಷದಿಂದಲೂ ಹೊರಗುಳಿಯುವುದಾಗಿ ಹೇಳಿದ್ದ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಇಂದು ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಪಕ್ಷದ ಕಚೇರಿಗೆ ರವಾನಿಸಿದ್ದಾರೆ.

ಈಗಾಗಲೇ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದ್ದ ಅಮರೀಂದರ್​ ಸಿಂಗ್​ ಕಾಂಗ್ರೆಸ್​ಗೆ ರಾಜೀನಾಮೆ ನೀಡ್ತಾರೆ ಎಂಬ ಸುದ್ದಿ ಪಕ್ಕಾ ಆಗಿತ್ತು. ಇಂದು ಶಿಷ್ಟಾಚಾರದಂತೆ ರಾಜೀನಾಮೆ ಪತ್ರ ನೀಡಿದ್ದಾರೆ.

ನವಜೋತ್​ ಸಿಂಗ್​ ಸಿಧು ಹಾಗೂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​​​​ ನಡುವಿನ ಘರ್ಷಣೆ ರಾಜೀನಾಮೆ ಪತ್ರದಲ್ಲಿಯೂ ಹೊಗೆಯಾಡಿದಂತೆ ಕಂಡಿದೆ. ರಾಜೀನಾಮೆ ಪತ್ರದ ಉದ್ದಕ್ಕೂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​, ನವಜೋತ್​ ಸಿಂಗ್​ ಸಿಧು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅಧಿಕೃತ ಘೋಷಣೆ ಮಾಡಿದ್ದರು. ಚುನಾವಣಾ ಆಯೋಗ ಒಪ್ಪಿಗೆ ನೀಡಿದ ಬಳಿಕ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದರು.


Leave a Reply

error: Content is protected !!