Local News

Caught on CCTV: ವಾಕ್‌ ಮಾಡುತ್ತಿದ್ದಾಗಲೇ ಬಂದೆರಗಿದ ಜವರಾಯ; ತಾಯಿ-ಮಗಳು ಸೇರಿದಂತೆ ಮೂವರ ಸಾವು

Caught on CCTV: ವಾಕ್‌ ಮಾಡುತ್ತಿದ್ದಾಗಲೇ ಬಂದೆರಗಿದ ಜವರಾಯ; ತಾಯಿ-ಮಗಳು ಸೇರಿದಂತೆ ಮೂವರ ಸಾವು

ತೆಲಂಗಾಣದ ಹೈದರಾಬಾದ್‌ನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಹೈದರ್‌ಶಕೋಟೆ ಮುಖ್ಯರಸ್ತೆಯಲ್ಲಿ ಮೂವರು ಬೆಳಗಿನ ವಾಕ್‌ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಕಾರು ಹೆಚ್ಚಿನ ವೇಗದಲ್ಲಿದ್ದೇ ಅಪಘಾತಕ್ಕೆ ಕಾರಣವೆಂದು ಗೊತ್ತಾಗಿದೆ.

ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತರಲ್ಲಿ ತಾಯಿ ಮತ್ತು ಮಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Disclaimer: This Story is auto-aggregated by a Syndicated Feed and has not been Created or Edited By City Big News Staff.