Politics News

ಚಂದ್ರಯಾನ 3:  ಭಾರತದ ಮೇಲೆ ವಿಶ್ವ ಚಿತ್ತ!

ಚಂದ್ರಯಾನ 3:  ಭಾರತದ ಮೇಲೆ ವಿಶ್ವ ಚಿತ್ತ!

ಭಾರತ ದೇಶವು ಕಳೆದ ಜು.14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಡಾಯನ ಕೇಂದ್ರದಿಂದ ಚಂದ್ರಯಾನ-3 ಮಿಷನ್ ರಾಕೆಟ್‍ನ್ನು ಮಧ್ಯಾಹ್ನ 2.35ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಲ್ಯಾಂಡರ್ ಮತ್ತು ರೋವರ್ ಒಳಗೊಂಡಿರುವ ಮಾಡ್ಯೂಲ್ ಇಂದು ಸಂಜೆ 6:04 ಕ್ಕೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿಯುವ ನಿರೀಕ್ಷೆಯಿದೆ. ಇದು 70 ದಿನಗಳ ಮಹಾ ಯುದ್ಧಕ್ಕೆ ಇಂದು ತೆರೆಬೀಳಲಿದೆ.

ಈವರೆಗೂ ಅಮೆರಿಕಾ, ಚೀನಾ ಮತ್ತು ಫ್ರಾನ್ಸ್ ರಾಷ್ಟ್ರಗಳು ಮಾತ್ರ ಯಶಸ್ವಿಯಾಗಿ ಚಂದ್ರನ ಮೇಲೆ ಹೆಜ್ಜೆ ಇರಿಸಿದ್ದವು. ಇದೀಗ ಭಾರತ 4ನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.ಇಂದು  ನೌಕೆಯು ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‍ಆಗುವ ಮುನ್ನ ಉಡಾವಣಾ ವಾಹನದಲ್ಲಿರುವ ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಅನ್ನು ಪ್ರತ್ಯೇಕಗೊಳಿಸುವ ಕಾರ್ಯ ಯಶಸ್ವಿಯಾಗಿದ್ದು, ಇದು ಚಂದ್ರಯಾನ- 3 ಯೋಜನೆ ಅಂತಿಮ ಕ್ಷಣಗಳ ಪ್ರಕ್ರಿಯೆಯಾಗಿದೆ.

ಚಂದ್ರಯಾನ -3 ಇಂದು ಯಶಸ್ವಿಯಾಗಿ ಚಂದ್ರನ ಮೇಲೆ ವಿಕ್ರಂ ಲ್ಯಾಡರ್ ನೆಲಕ್ಕಿಳಿದು ಇತಿಹಾಸ ಬರೆಯಲು ಸಿದ್ದವಾಗಿದೆ ಹಾಗೂ ಈ ದಿನವನ್ನು ಅಮೃತಾಕ್ಷರದಲ್ಲಿ ಬರೆಯಬೇಕಾಗಿದೆ. ಭಾರತೀಯರು ಈ ದಿನವನ್ನು ಎಂದೂ ಸಹ ಮರೆಯಲಾಗದಂತಹ ಕ್ಷಣವಾಗಿರುತ್ತದೆ, ಹಾಗೂ ನಾವು ಹೆಮ್ಮೆ ಪಡುವಂತಹ ದಿನವಾಗಿದೆ. ಈ ಯೋಜನೆಯ ಹೊಣೆ ಹೊತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೋ) ಹಾಗೂ 140 ಕೋಟಿ ಭಾರತೀಯರ ಜೊತೆ ರೋಚಕ ಕ್ಷಣಕ್ಕಾಗಿ ಉಸಿರು ಬಿಗಿದುಕೊಂಡು ಕಾದಿದ್ದಾರೆ, ಹಾಗೂ ಇಡೀ ವಿಶ್ವದ್ಯಾಂತ ಎಲ್ಲರ ಗಮನ ಭಾರತದ ಮೇಲೆ ನಿಂತಿದೆ.

Disclaimer: This Story is auto-aggregated by a Syndicated Feed and has not been Created or Edited By City Big News Staff.