Please assign a menu to the primary menu location under menu

State

ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಗೃಹ ಸಚಿವರಿಂದ ಅಭಿನಂದನೆ

ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಗೃಹ ಸಚಿವರಿಂದ ಅಭಿನಂದನೆ

ಬೆಂಗಳೂರು : ನಟ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿದಾಯ ಸಂಧರ್ಬದಲ್ಲಿ ಹರಿದು ಬಂದ ಜನಸಾಗರ ವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ಪೊಲೀಸ್ ಸಿಬ್ಬಂದಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೃತ್ಪೂರ್ವಕವಾಗಿ, ಅಭಿನಂದಿಸಿದ್ದಾರೆ.

ಸಚಿವರು ಇಂದು ರಾಜ್ಯ ಪೊಲೀಸ್ ಮುಖ್ಯ ಕಚೇರಿಯಲ್ಲಿ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್ ರವರ ಅನಿರೀಕ್ಷಿತ ನಿಧನ ಹಾಗೂ ಕ್ಲಪ್ತ ಅವಧಿಯಲ್ಲಿ ಯೋಜನಾಬದ್ಧವಾಗಿ ರಕ್ಷಣಾ ವ್ಯವಸ್ಥೆ ನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ವಿಶೇಷ ಕರ್ತವ್ಯ ನಿರ್ವಹಣೆಗೆ ನೀಡಲಾಗುವ ಭತ್ಯೆ ಹಾಗೂ ಇನ್ನಿತರ ಸವಲತ್ತುಗಳನ್ನು, ಕಾನ್ಸ್ಟೇಬಲ್ ಗಳಿಗೆ, ಇನ್ನು ಹತ್ತು ದಿನಗಳ ಒಳಗೆ ಪಾವತಿಸಲು ಕ್ರಮ ತೆಗೆದುಕೊಳ್ಳುವಂತೆಯೂ, ಸಚಿವರು ಸೂಚಿಸಿದರು.

ಇದೇ ಸಂಧರ್ಬದಲ್ಲಿ ಪೊಲೀಸ್ ಮುಖ್ಯಸ್ಥ ಶ್ರೀ ಪ್ರವೀಣ್ ಸೂದ್ ಅವರೂ ಮಾತನಾಡಿ, “ಪುನೀತ್ ರಾಜಕುಮಾರ್ ರವರ ಅಕಾಲಿಕ ನಿಧನ ಹಾಗೂ ಅಂತಹ ಕ್ಲಿಷ್ಟರವಾದ ಸನ್ನಿವೇಶವನ್ನು, ವಿವರಿಸಿದ್ದಲ್ಲದೆ, ಎಲ್ಲಾ ಪೊಲೀಸ್ ಅಧಿಕಾರಿಗಳು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ, ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು, ಎಂದು ತಿಳಿಸಿದರು.


Leave a Reply

error: Content is protected !!