Please assign a menu to the primary menu location under menu

State

ತಂದೆ, ತಾಯಿ ಬಳಿ ಹೋದ ಅಪ್ಪು; ಮಂಗಳವಾರ ಹಾಲು, ತುಪ್ಪ ಕಾರ್ಯ

ತಂದೆ, ತಾಯಿ ಬಳಿ ಹೋದ ಅಪ್ಪು; ಮಂಗಳವಾರ ಹಾಲು, ತುಪ್ಪ ಕಾರ್ಯ

ಬೆಂಗಳೂರು: ಇಂದು ಹಾಲುತುಪ್ಪ ಕಾರ್ಯ ಇರುವುದಿಲ್ಲ. ಇಂದು ಪೂಜೆ ನೆರವೇರಿಸಲಾಗುತ್ತದೆ. ಐದನೇ ದಿನ ಮಂಗಳವಾರ ಹಾಲು ತುಪ್ಪ ಶಾಸ್ತ್ರ ನೆರವೇರಿಸಲಾಗುವುದು. ಸ್ಟುಡಿಯೋ ಒಳಗೆ ಜನರಿಗೆ ಪ್ರವೇಶ ಇರುವುದಿಲ್ಲ. 5 -6  ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಗೌರವಯುತವಾಗಿ ಅಪ್ಪು ಕಳಿಸಿಕೊಟ್ಟಿದ್ದೀರಿ ಎಂದು ಸರ್ಕಾರ, ಪೊಲೀಸರು, ಜನತೆ, ಅಭಿಮಾನಿಗಳಿಗೆ ರಾಘವೇಂದ್ರ ರಾಜಕುಮಾರ್ ಧನ್ಯವಾದ ಹೇಳಿದ್ದಾರೆ. ಅಪ್ಪ, ಅಮ್ಮನಿಗೆ ನಮಗಿಂತ ಹೆಚ್ಚು ಅಪ್ಪು ಇಷ್ಟವಾಗಿದ್ದ. ಅಪ್ಪ-ಅಮ್ಮ ಇದ್ದಲ್ಲಿಗೆ ಹೋದ. ಅಭಿಮಾನಿಗಳ ಪ್ರೀತಿಗೆ ಯಾವುದು ಸಾಟಿ ಇಲ್ಲ. ಶಾಂತಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿತ್ತು. ಎಲ್ಲರೂ ನಮಗೆ ಸಹಕಾರ ಕೊಟ್ಟಿದ್ದೇವೆ. ಅದಕ್ಕೆ ಅಪ್ಪಾಜಿ ಅಭಿಮಾನಿಗಳು ದೇವರೆಂದು ಕರೆದಿದ್ದರು ಎಂದು ಹೇಳಿದ್ದಾರೆ.


Leave a Reply

error: Content is protected !!