Please assign a menu to the primary menu location under menu

State

BIG NEWS: ರಾಯಚೂರಿನಲ್ಲಿ ಡೆಂಘ್ಯೂ ಅಟ್ಟಹಾಸಕ್ಕೆ ಐವರು ಬಲಿ; 73 ಜನರಲ್ಲಿ ಸೋಂಕು ಪತ್ತೆ

BIG NEWS: ರಾಯಚೂರಿನಲ್ಲಿ ಡೆಂಘ್ಯೂ ಅಟ್ಟಹಾಸಕ್ಕೆ ಐವರು ಬಲಿ; 73 ಜನರಲ್ಲಿ ಸೋಂಕು ಪತ್ತೆ

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು, ಐವರು ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ 1514 ಜನರು ಜ್ವರದಿಂದ ಬಳಲುತ್ತಿದ್ದು, 73 ಜನರಲ್ಲಿ ಡೆಂಘ್ಯೂ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಮಾನ್ವಿ ಪಟ್ಟಣದಲ್ಲಿ 17 ಜನರಲ್ಲಿ ಡೆಂಘ್ಯೂ ದೃಢಪಟ್ಟಿದೆ. ಮಾನ್ವಿ ಒಂದರಲ್ಲೇ ಕಳೆದ ಒಂದು ತಿಂಗಳಲ್ಲಿ ನಾಲ್ವರು ಶಂಕಿತ ಡೆಂಘಿಗೆ ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ಮೂರು ಜನರು ಡೆಂಘಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 23 ತಂಡ ರಚಿಸಿ ಡೆಂಘ್ಯೂ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.


Leave a Reply

error: Content is protected !!