Please assign a menu to the primary menu location under menu

Entertainment

ಹುಟ್ಟುಹಬ್ಬದ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ಡ್ರೀಮ್ ಗರ್ಲ್ ಹೇಮಾಮಾಲಿನಿ….!

ಹುಟ್ಟುಹಬ್ಬದ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ಡ್ರೀಮ್ ಗರ್ಲ್ ಹೇಮಾಮಾಲಿನಿ….!

ಅಕ್ಟೋಬರ್ 16ರಂದು ತಮ್ಮ ಕುಟುಂಬ ಮತ್ತು ಆಪ್ತರೊಂದಿಗೆ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ಹೇಮಾ ಮಾಲಿನಿ ಈಗ ತಮ್ಮ ಪತಿ, ನಟ ಧರ್ಮೇಂದ್ರ ಅವರೊಂದಿಗೆ ರಿಲ್ಯಾಕ್ಸ್ ಆಗಿದ್ದಾರೆ. ನಟಿ Read more…

ಅಕ್ಟೋಬರ್ 16ರಂದು ತಮ್ಮ ಕುಟುಂಬ ಮತ್ತು ಆಪ್ತರೊಂದಿಗೆ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ಹೇಮಾ ಮಾಲಿನಿ ಈಗ ತಮ್ಮ ಪತಿ, ನಟ ಧರ್ಮೇಂದ್ರ ಅವರೊಂದಿಗೆ ರಿಲ್ಯಾಕ್ಸ್ ಆಗಿದ್ದಾರೆ.

ನಟಿ ಮಂಗಳವಾರ ತಮ್ಮ ಮತ್ತು ಧರ್ಮೇಂದ್ರ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತ್ತು ಅವರ ಜನ್ಮದಿನದಂದು ಶುಭಹಾರೈಸಿದ ತನ್ನ ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

“ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಿದ ಮತ್ತು ಸುಂದರವಾದ ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರಿಂದ ತುಂಬಾ ಪ್ರೀತಿಯನ್ನು ಸ್ವೀಕರಿಸುತ್ತಿರುವುದು ಬಹಳ ಸಂತೋಷದ ವಿಚಾರ. ಎಲ್ಲರಿಗೂ ಧನ್ಯವಾದಗಳು. ಆಚರಣೆ ನಂತರ ವಿಶ್ರಾಂತಿ..” ಎಂದು ಬರೆದಿದ್ದಾರೆ. ಚಿತ್ರದಲ್ಲಿ, ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರು ಒಟ್ಟಿಗೆ ನಿಂತಿರುವ ಮುದ್ದಾದ ಫೋಟೋವನ್ನು ನೋಡಬಹುದು.

ತಮ್ಮ ಹುಟ್ಟುಹಬ್ಬದ ಒಂದೆರಡು ದಿನಗಳ ನಂತರ, ಹೇಮಾ ಮಾಲಿನಿ ಅವರು ಆಚರಣೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಪುತ್ರಿ ಇಶಾ ಡಿಯೋಲ್, ಧರ್ಮೇಂದ್ರ ಮತ್ತು ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರೊಂದಿಗೆ ಕೆಲಸ ಮಾಡಿದ ಹಿರಿಯ ನಟ ಸಂಜಯ್ ಖಾನ್ ಅವರೊಂದಿಗೆ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. “ಕುಟುಂಬ ಮತ್ತು ಕೆಲವು ಆಪ್ತ ಸ್ನೇಹಿತರೊಂದಿಗೆ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆಗಳು” ಎಂದು ನಟಿ ಶೀರ್ಷಿಕೆ ನೀಡಿದ್ದಾರೆ.


Leave a Reply

error: Content is protected !!