
ಮಂಡ್ಯ: ಮಂಡ್ಯ ಜಿಲ್ಲಾ ವಾರ್ತಾ ಇಲಾಖೆಯ ‘ಪ್ರೆಸ್ ವೆಹಿಕಲ್’ ಗೆ ಕೃಷಿ ಸಚಿವ ಹಾಗು ಮಂಡ್ಯ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಚಾಲನೆ ನೀಡಿದರು. ಈ ವೇಳೆ ಶಾಸಕರಾದ ಕೆ.ಎಂ.ಉದಯ್, ನರೇಂದ್ರ ಸ್ವಾಮಿ, ಪಿ.ರವಿ ಕುಮಾರ್, ದರ್ಶನ್ ಪುಟ್ಟಣ್ಣಯ್ಯ, ವಾರ್ತಾ ಧಿಕಾರಿ ನಿರ್ಮಲಾ ಹಾಜರಿದ್ದರು.