Please assign a menu to the primary menu location under menu

State

ಶಾಲೆಗಳು ಮುಚ್ಚಿದ್ದ ವೇಳೆ ಶಿಕ್ಷಣದಿಂದ 80% ರಷ್ಟು ಮಕ್ಕಳು ದೂರ


ಬೆಂಗಳೂರು, ನವೆಂಬರ್ 15, 2021: ಕೋವಿಡ್ -19 ನಿಂದಾಗಿ ಶಾಲೆಗಳು ಮುಚ್ಚಿದ್ದ ಪರಿಣಾಮವಾಗಿ 20% ರಷ್ಟು ಶಾಲಾ ವಯಸ್ಸಿನ ಮಕ್ಕಳು ಮಾತ್ರ ಔಪಚಾರಿಕವಾದ ಶಿಕ್ಷಣ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬುದನ್ನು ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮೀಕ್ಷೆಯೊಂದು ಪತ್ತೆ ಮಾಡಿದೆ. ಶಾಲಾ ವಯಸ್ಸಿನ ಮಕ್ಕಳೆಂದರೆ 5 ರಿಂದ 18 ವರ್ಷದೊಳಗಿನವರು ಎಂದು ಪರಿಗಣಿಸಲಾಗಿದೆ.

ಏಷ್ಯಾ ಪೆಸಿಫಿಕ್ ವಲಯದಲ್ಲಿ ಡಿಜಿಟಲ್ ನೀತಿ ವಿಚಾರಗಳಿಗೆ ಸಂಬಂಧಿಸಿದಂತೆ ಥಿಂಕ್ ಟ್ಯಾಂಕ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಮತ್ತು ನವದೆಹಲಿಯಿಂದ ಹೊರಗೆ ಐಸಿಆರ್‍ಐಇಆರ್ ನೀತಿ ಆಧಾರಿತ ಆರ್ಥಿಕ ನೀತಿಯ ಥಿಂಕ್ ಟ್ಯಾಂಕ್ ಎನಿಸಿರುವ ಎಲ್‍ಐಆರ್‍ಎನ್‍ಇಏಷ್ಯಾ ಈ ಸಮೀಕ್ಷೆಯನ್ನು ಕೈಗೊಂಡಿದೆ.

2021 ರಲ್ಲಿ ನಡೆದ ಈ ಸಮೀಕ್ಷೆಯಲ್ಲಿ ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಸ್ಥಿತಿವಂತ ಕುಟುಂಬಗಳು, ಮನೆಯ ಮುಖ್ಯಸ್ಥರು ಉತ್ತಮ ಸುಶಿಕ್ಷಿತರಾಗಿರುವ ಕುಟುಂಬಗಳ ಮಕ್ಕಳು ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಲಾಗಿದೆ.

ಒಟ್ಟಾರೆ 20% ರಷ್ಟು ಮಕ್ಕಳು ಶಾಲೆ ಮುಚ್ಚಿದ ಸಂದರ್ಭದಲ್ಲಿ ಬಹು ಚಾನೆಲ್‍ಗಳ ಮೂಲಕ ಶಿಕ್ಷಣ ಪಡೆದಿದ್ದಾರೆ. ಆದರೆ, ವಿದ್ಯಾರ್ಥಿಗಳ ಅನುಭವಗಳು ವೈವಿಧ್ಯಮಯವಾಗಿದ್ದವು. ಕೇವಲ 55% ರಷ್ಟು ವಿದ್ಯಾರ್ಥಿಗಳು (ಕೆಲವು ಶಿಕ್ಷಣವನ್ನು ಪಡೆದ ಈ ಸಣ್ಣ ಗುಂಪಿನಲ್ಲಿ) ಲೈವ್ (ನೈಜ ಸಮಯ) ಆನ್‍ಲೈನ್ ಪಾಠಗಳಲ್ಲಿ ಭಾಗವಹಿಸಿದ್ದಾರೆ. ಆದರೆ, 68% ರಷ್ಟು ಮಕ್ಕಳು ರೆಕಾರ್ಡ್ ಮಾಡಿದ ವಿಡಿಯೋ ಪಾಠಗಳನ್ನು ವೀಕ್ಷಿಸಿ, ಕಲಿತ್ತಿದ್ದಾರೆ ಹಾಗೂ ವಾಟ್ಸಪ್‍ನಂತಹ ಚಾನೆಲ್‍ಗಳ ಮೂಲಕ ತಮ್ಮ ಸ್ಮಾರ್ಟ್‍ಫೋನ್‍ಗಳಿಗೆ ಮಾಹಿತಿ ಮತ್ತು ಕಾರ್ಯಯೋಜನೆಗಳನ್ನು ಸಂವಹನ ಮಾಡಿರುವವರ ಪ್ರಮಾಣ 75%. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಪೈಕಿ 58% ರಷ್ಟು ವಿದ್ಯಾರ್ಥಿಗಳು ಆಫ್‍ಲೈನ್ ಚಾನೆಲ್‍ಗಳ ಮೂಲಕ ಶಾಲೆಗಳೊಂದಿಗೆ ಸಂಪರ್ಕ ನಡೆಸಿದ್ದಾರೆ. ಇದರೊಂದಿಗೆ ಪಾಠ ಪ್ರವಚನಗಳ ಬಗ್ಗೆ ಮಾಹಿತಿಗಳು ಮತ್ತು ಅಸೈನ್‍ಮೆಂಟ್‍ಗಳನ್ನು ಭೌತಿಕವಾಗಿ ಮನೆಗೆ ಕೊಂಡೊಯ್ದಿದ್ದಾರೆ.

ಆದಾಗ್ಯೂ, 80% ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಶಿಕ್ಷಣ ಪಡೆದವರು ಮತ್ತು ಪಡೆಯದೇ ಇರುವವರು ಎದುರಿಸುವ ಸವಾಲುಗಳೂ ಭಿನ್ನವಾಗಿವೆ. ಶಿಕ್ಷಣ ಪಡೆದವರ ಪೋಷಕರು ಎದುರಿಸಿದ ಪ್ರಮುಖ ಸವಾಲುಗಳೆಂದರೆ ತಮ್ಮ ಮಕ್ಕಳು ಪಾಠಗಳ ಬಗ್ಗೆ ಗಮನಹರಿಸದೇ ಇರುವುದು, ಶಾಲೆಗಳು ಆನ್‍ಲೈನ್ ಶಿಕ್ಷಣವನ್ನು ನೀಡಲು ಸಿದ್ಧವಾಗಿರದೇ ಇದ್ದುದು ಮತ್ತು ಹೆಚ್ಚಿನ ಡೇಟಾ ವೆಚ್ಚಗಳು ಎಂದು ಹೇಳಿಕೊಂಡಿದ್ದಾರೆ. ಅದೇರೀತಿ, ಶಿಕ್ಷಣವನ್ನು ಪಡೆಯದೇ ಇರಲು ಕಾರಣ ತಮ್ಮ ಪ್ರದೇಶಗಳಲ್ಲಿ ಕಳಪೆ ಸಂಪರ್ಕ (3ಜಿ ಮತ್ತು 4ಜಿ ಸಿಗ್ನಲ್) ಮತ್ತು ಮನೆಯಲ್ಲಿ ಅಸಮರ್ಪಕವಾದ ಸಾಧನಗಳು ಹಾಗೂ ತಮ್ಮ ಕುಟುಂಬ ಸದಸ್ಯರು ಈ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೇ ಇರುವುದಾಗಿದೆ.

ಈ ಸಮೀಕ್ಷಾ ವರದಿಯನ್ನು 12 ನವೆಂಬರ್ 2021 ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರಗಳು ಮತ್ತು ಖಾಸಗಿ ವಲಯಗಳ ಮತ್ತು ನಾಗರಿಕ ಸಮಾಜದ ಪ್ರಮುಖ ಪ್ರತಿನಿಧಿಗಳು ಸಂವಾದಗಳಲ್ಲಿ ಪಾಲ್ಗೊಂಡು ಶಿಕ್ಷಣ ವ್ಯವಸ್ಥೆ ಬಗ್ಗೆ ಮತ್ತು ಸಮೀಕ್ಷಾ ವರದಿಯ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ಡಾ.ಜೈಜಿತ್ ಭಟ್ಟಾಚಾರ್ಯ (ಅಧ್ಯಕ್ಷರು, ಸೆಂಟರ್ ಫಾರ್ ಡಿಜಿಟಲ್ ಎಕಾನಮಿ ಪಾಲಿಸಿ ರೀಸಚ್), ಅಭಿಷೇಕ್ ಸಿಂಗ್ (ಅಧ್ಯಕ್ಷರು & ಸಿಇಒ, ನ್ಯಾಷನಲ್ ಇ-ಗವರ್ನೆನ್ಸ್ ಡಿವಿಶನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ), ನಿಶಾಂತ್ ಬಘೇಲ್ (ನಿರ್ದೇಶಕರು, ಟೆಕ್ನಾಲಾಜಿ ಇನ್ನೋವೇಶನ್ಸ್, ಪ್ರಥಮ್) ಮತ್ತು ಹೆಲಾನಿ ಗಲ್ಪಾಯ (ಸಿಇಒ, ಎಲ್‍ಐಆರ್‍ಎನ್‍ಇಏಷ್ಯಾ) ಸೇರಿದಂತೆ ಇನ್ನಿತರೆ ಪ್ರಮುಖ ಶಿಕ್ಷಣ ತಜ್ಞರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂವಾದ ಕಾರ್ಯಕ್ರಮವನ್ನು ಡಾ.ರಜತ್ ಕಠೂರಿಯಾ (ಸೀನಿಯರ್ ವಿಸಿಟಿಂಗ್ ಪ್ರೊಫೆಸರ್, ಐಸಿಆರ್‍ಐಇಆರ್) ಅವರು ನಡೆಸಿಕೊಟ್ಟರು.

ಎಲ್‍ಐಆರ್‍ಎನ್‍ಇಏಷ್ಯಾದ ಸಿಇಒ ಹೆಲಾನಿ ಗಲ್ಪಾಯ ಅವರು ಮಾತನಾಡಿ, “ಈ ಸಾಂಕ್ರಾಮಿಕವು ಶಿಕ್ಷಣದ ಅಂತರವನ್ನು ಅತ್ಯಂತ ಹೆಚ್ಚು ಉಲ್ಬಣವಾಗುವಂತೆ ಮಾಡಿತು. ಇದು ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿತು. ಆದರೆ, ಇದಕ್ಕೆ ಕೇವಲ ಸಂಪರ್ಕದ ಸಮಸ್ಯೆಯೊಂದೇ ಕಾರಣವಲ್ಲ. ಶಾಲೆಗಳು ಮಕ್ಕಳ ಶಿಕ್ಷಣದ ಕಾವಲು ಕಾಯಲಿಲ್ಲ ಮತ್ತು ಮೊದಲ ಸುತ್ತಿನ ಲಾಕ್‍ಡೌನ್ ವೇಳೆ ಆನ್‍ಲೈನ್ ಪಾಠಗಳನ್ನು ನೀಡಲು ಸಿದ್ಧರಿರಲಿಲ್ಲ. ಅದೃಷ್ಠವಶಾತ್ ನಂತರದ ದಿನಗಳಲ್ಲಿ ಪರಿಸ್ಥಿತಿಗಳು ಸುಧಾರಣೆ ಕಂಡವು. ಆದರೆ, ನೈಜ ಸಮಯದ ಆನ್‍ಲೈನ್ ಮತ್ತು ಸ್ವಯಂ ನಿರ್ದೇಶಿತವಾದ ಕಲಿಕೆ ಮತ್ತು ಅರ್ಥಪೂರ್ಣವಾದ ಪ್ರತಿಕ್ರಿಯೆಯ ಮಿಶ್ರಣವನ್ನು ನೀಡದ ಹೊರತು ಕಲಿಕೆಯಲ್ಲಿನ ಅಂತರವನ್ನು ಕಡಿಮೆ ಮಾಡುವ ಸೇತುವನ್ನು ನಿರ್ಮಿಸಲಾಗಿರುವುದಿಲ್ಲ’’ ಎಂದು ಅಭಿಪ್ರಾಯಪಟ್ಟರು.

ಐಸಿಆರ್‍ಐಇಆರ್ ಸೀನಿಯರ್ ವಿಸಿಟಿಂಗ್ ಪ್ರೊಫೆಸರ್ ಡಾ.ರಜತ್ ಕಠೂರಿಯಾ ಅವರು ಮಾತನಾಡಿ, “ಸಾಂಕ್ರಾಮಿಕದಿಂದ ಹೆಚ್ಚು ಪರಿಣಾಮಕ್ಕೆ ಒಳಗಾದವರೆಂದರೆ ಶಾಲೆಗೆ ಹೋಗುವ ಮಕ್ಕಳು. ಇಂಟರ್ನೆಟ್ ಸಾಧನಗಳಿಲ್ಲದೇ ಹಲವಾರು ಕುಟುಂಬಗಳು ತಮ್ಮ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ನೀಡಲು ಅಥವಾ ಅದಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನಮ್ಮ ಈ ಸಮೀಕ್ಷೆ ದೃಢಪಡಿಸಿದೆ. ಸಾಧನಗಳು ಮತ್ತು ಇಂಟರ್ನೆಟ್ ಸಂಪರ್ಕ ಲಭ್ಯವಿದ್ದರೂ ಆನ್‍ಲೈನ್ ಕಲಿಕೆಗೆ ಹೊಂದಿಕೊಳ್ಳಲು ಮಕ್ಕಳಿಗೆ ಸಾಕಷ್ಟು ಸಮಯವಾಯಿತು. ಕಲಿಕೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುವಂತಹ ಮೂಲಸೌಕರ್ಯಗಳು ಮತ್ತು ಕಲಿಕಾ ಪರಿಕರಗಳತ್ತ ಶಿಕ್ಷಣ ನೀತಿ ಒತ್ತು ನೀಡುವ ಅಗತ್ಯವಿದೆ’’ ಎಂದು ಅಭಿಪ್ರಾಯಪಟ್ಟರು.

 

 


Leave a Reply

error: Content is protected !!