Please assign a menu to the primary menu location under menu

Crime News

ಮಾಜಿ ಪ್ರಿಯತಮೆಗೆ ನಡುರಸ್ತೆಯಲ್ಲೇ 7 ಬಾರಿ ಇರಿದ ಭಗ್ನ ಪ್ರೇಮಿ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಮಾಜಿ ಪ್ರಿಯತಮೆಗೆ ನಡುರಸ್ತೆಯಲ್ಲೇ 7 ಬಾರಿ ಇರಿದ ಭಗ್ನ ಪ್ರೇಮಿ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಭೇಟಿ ಮಾಡುವ ನೆಪದಲ್ಲಿ ಬಂದ ಮಾಜಿ ಪ್ರಿಯತಮ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆರೋಪಿ ಯುವತಿಯನ್ನು ಎಷ್ಟು ಅಮಾನುಷವಾಗಿ ಕೊಲೆಗೈದಿದ್ದ Read more…

ಭೇಟಿ ಮಾಡುವ ನೆಪದಲ್ಲಿ ಬಂದ ಮಾಜಿ ಪ್ರಿಯತಮ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಆರೋಪಿ ಯುವತಿಯನ್ನು ಎಷ್ಟು ಅಮಾನುಷವಾಗಿ ಕೊಲೆಗೈದಿದ್ದ ಎಂದರೆ ಆಕೆಯ ಮೃತದೇಹ ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಆರೋಪಿಯು ಮೃತ ಯುವತಿಯ ನೆರೆಮನೆಯಾತ ಎನ್ನಲಾಗಿದೆ. ಈ ಸಂಬಂಧ ಯಾವುದೇ ಠಾಣೆಗಳಲ್ಲಿ ಪ್ರಕರಣ ದಾಖಲಾಗಿಲ್ಲ. ಸ್ವಯಂ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಯುವತಿಯ ಮಾಜಿ ಪ್ರಿಯತಮ ಈಕೆಯನ್ನು ಭೇಟಿ ಮಾಡೋದಕ್ಕೆ ಕರೆದಿದ್ದನು. ಮಾಜಿ ಪ್ರಿಯತಮನ ಬಳಿ ಯುವತಿ ಬರುತ್ತಿದ್ದಂತೆಯೇ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ಯುವಕ ಯುವತಿಗೆ ಚಾಕುವಿನಿಂದ ಇರಿದ್ದಾನೆ. ಆಸ್ಪತ್ರೆಯಿಂದ ಈ ಹತ್ಯೆಯ ಮಾಹಿತಿಯು ಪೊಲೀಸರಿಗೆ ತಲುಪಿದೆ. ಅಲ್ಲಿಯವರೆಗೂ ಈ ಸಂಬಂಧ ಯಾರೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್​ ತನಿಖೆಯಲ್ಲಿ ಆರೋಪಿಯ ಹೆಸರು ಅಂಕಿತ್​ ಗಬಾ ಅಲಿಯಾಸ್​​ ಹಿಮಾಂಶು ಅಲಿಯಾಸ್​​ ಮನೀಷ್​ ಎಂದು ತಿಳಿದುಬಂದಿದೆ. ಮೃತ ಯುವತಿಯನ್ನು 24 ವರ್ಷದ ಡಾಲಿ ಎಂದು ಗುರುತಿಸಲಾಗಿದೆ. ಚಾಕುವಿನಿಂದ ದಾಳಿಗೆ ಒಳಗಾದ ಬಳಿಕ ಯುವತಿಯು ರಕ್ತದ ನಡುವೆಯೂ ತಾನೇ ಆಸ್ಪತ್ರೆಗೆ ಬಂದಿದ್ದಳು ಎನ್ನಲಾಗಿದೆ. ಆದರೂ ಕೂಡ ಆಕೆಯ ಪ್ರಾಣ ಉಳಿಯಲಿಲ್ಲ.

ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ ಮೃತ ಯುವತಿಗೆ ಒಟ್ಟು 7 ಬಾರಿ ಚಾಕುವಿನಿಂದ ಇರಿಯಲಾಗಿದೆ. ಹೀಗಾಗಿ ಆಕೆಗೆ ಗಂಭೀರ ಗಾಯಗಳಾಗಿದ್ದವು. ಸದ್ಯ ಕಣ್ಮರೆಯಾಗಿರುವ ಅಂಕಿತ್​ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಅಂಕಿತ್​ ಹಾಗೂ ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

error: Content is protected !!