Please assign a menu to the primary menu location under menu

State

SHOCKING NEWS: ಅಪ್ಪ ಬೈದಿದ್ದಕ್ಕೆ ಆತ್ಮಹತ್ಯೆಗೆ ಮುಂದಾದ ಬಾಲಕ; ರೈಲಿನಡಿ ಕುಳಿತು ಸೆಲ್ಫಿ ವಿಡಿಯೋ ಕಳುಹಿಸಿದ ವಿದ್ಯಾರ್ಥಿ

SHOCKING NEWS: ಅಪ್ಪ ಬೈದಿದ್ದಕ್ಕೆ ಆತ್ಮಹತ್ಯೆಗೆ ಮುಂದಾದ ಬಾಲಕ; ರೈಲಿನಡಿ ಕುಳಿತು ಸೆಲ್ಫಿ ವಿಡಿಯೋ ಕಳುಹಿಸಿದ ವಿದ್ಯಾರ್ಥಿ

ಬೆಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಅಪ್ಪ ಬೈದರೆಂದು ಬೇಸರಗೊಂಡ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ ಘಟನೆ ನಡೆದಿದೆ. ಮಹದೇವಪುರದ 16 ವರ್ಷದ ಬಾಲಕ Read more…

ಬೆಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಅಪ್ಪ ಬೈದರೆಂದು ಬೇಸರಗೊಂಡ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ ಘಟನೆ ನಡೆದಿದೆ.

ಮಹದೇವಪುರದ 16 ವರ್ಷದ ಬಾಲಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದದ್ದಕ್ಕೆ ಅಪ್ಪ ಬೈದರು ಎಂದು ಬೇಸರಗೊಂಡು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದು ಕೆಕೆ ಎಕ್ಸ್ ಪ್ರೆಸ್ ಟ್ರೇನ್ ಅಡಿ ಮಲಗಿದ್ದಾನೆ. ಬಳಿಕ ಅಲ್ಲಿಂದಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ಚಿಕ್ಕಪ್ಪನಿಗೆ ಕಳುಹಿಸಿದ್ದಾನೆ.

ವಿಡಿಯೋ ನೋಡಿ ಶಾಕ್ ಆದ ಬಾಲಕನ ಚಿಕ್ಕಪ್ಪ, ಮನೆಯವರಿಗೆ ವಿಷಯ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದ ಅನೌನ್ಸ್ ಮೆಂಟ್ ಕೂಡ ರೆಕಾರ್ಡ್ ಆಗಿದ್ದರಿಂದ ಅದೇ ಸುಳಿವಿನಿಂದ ಬಾಲಕನ ಪತ್ತೆ ಹಚ್ಚಲಾಗಿದೆ. ತಕ್ಷಣ ಪೋಷಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಧಾವಿಸಿ, ಆರ್ ಪಿ ಎಫ್ ತಂಡದ ಸಹಾಯದಿಂದ ರೈಲಿನಡಿ ಅವಿತು ಕುಳಿತಿದ್ದ ಬಾಲಕನ ರಕ್ಷಣೆ ಮಾಡಿದ್ದಾರೆ. ಬಾಲಕನಿಗೆ ಬುದ್ಧಿವಾದ ಹೇಳಿ ಪೋಷಕರಿಗೆ ಒಪ್ಪಿಸಿದ್ದಾರೆ.


Leave a Reply

error: Content is protected !!