Please assign a menu to the primary menu location under menu

international

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವುಮೆಕ್ಸಿಕೋ: ಹಾಲಿವುಡ್‌ ಸಿನಿಮಾ ನಟ ಅಲೆಕ್‌ ಬಾಲ್ಡ್ವಿನ್ ಅವರ “ರಸ್ಟ್‌’ ಸಿನಿಮಾ ಚಿತ್ರೀಕರಣದ ವೇಳೆ, ಬಂದೂಕಿನಿಂದ ಹಾರಿಸಿದ ಗುಂಡು ಅಕಸ್ಮಾತಾಗಿ ಸಿನಿಮಾಟೋಗ್ರಾಫ‌ರ್‌ ಹೆಲಿನಾ ಹಚಿನ್ಸ್‌(42)ಗೆ ತಾಗಿ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಚಿತ್ರದ ನಿರ್ದೇಶಕರು ಕೂಡ ಗಾಯಗೊಂಡಿದ್ದಾರೆ.
ಮೆಕ್ಸಿಕೋದ ಸಂತ ಫೆ ಹೊರವಲಯದಲ್ಲಿ ಶುಕ್ರವಾರ ಬಾಲ್ಡ್ವಿನ್ ಅವರಿಂದ ಶೂಟ್‌ ಮಾಡಿಸುವ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಅಲ್ಲಿ ಪ್ರಾಪ್‌ ಗನ್‌ ಬಳಸಿ ನಟ ಬಾಲ್ಡ್ವಿನ್ ಶೂಟ್‌ ಮಾಡುವಾಗ, ಅದು ಗುರಿ ತಪ್ಪಿ, ಚಿತ್ರದ ಫೋಟೋಗ್ರಫಿ ನಿರ್ದೇಶಕಿ ಹೆಲಿನಾ ಅವರಿಗೆ ತಾಕಿದೆ. ಗಂಭೀರ ಗಾಯಗೊಂಡ ಅವರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಮನುಷ್ಯರನ್ನಾಗಿಸುವಲ್ಲಿ ಪ್ರಸ್ತುತ ಶಿಕ್ಷಣ ವಿಫ‌ಲ: ಆರಗ ಜ್ಞಾನೇಂದ್ರ
ನಿರ್ದೇಶಕ ಜೋಯೆಲ್‌ ಸೌಜಾಗೂ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಬಗ್ಗೆ ಮೆಕ್ಸಿಕೋದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ಬಾಲ್ಡ್ವಿನ್ ಅವರು ತಮ್ಮಿಂದಾದ ಅಚಾತುರ್ಯಕ್ಕೆ ಕಣ್ಣೀರು ಹಾಕಿದ್ದಾರೆ.

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಮೆಕ್ಸಿಕೋ: ಹಾಲಿವುಡ್‌ ಸಿನಿಮಾ ನಟ ಅಲೆಕ್‌ ಬಾಲ್ಡ್ವಿನ್ ಅವರ “ರಸ್ಟ್‌’ ಸಿನಿಮಾ ಚಿತ್ರೀಕರಣದ ವೇಳೆ, ಬಂದೂಕಿನಿಂದ ಹಾರಿಸಿದ ಗುಂಡು ಅಕಸ್ಮಾತಾಗಿ ಸಿನಿಮಾಟೋಗ್ರಾಫ‌ರ್‌ ಹೆಲಿನಾ ಹಚಿನ್ಸ್‌(42)ಗೆ ತಾಗಿ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಚಿತ್ರದ ನಿರ್ದೇಶಕರು ಕೂಡ ಗಾಯಗೊಂಡಿದ್ದಾರೆ.

ಮೆಕ್ಸಿಕೋದ ಸಂತ ಫೆ ಹೊರವಲಯದಲ್ಲಿ ಶುಕ್ರವಾರ ಬಾಲ್ಡ್ವಿನ್ ಅವರಿಂದ ಶೂಟ್‌ ಮಾಡಿಸುವ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಅಲ್ಲಿ ಪ್ರಾಪ್‌ ಗನ್‌ ಬಳಸಿ ನಟ ಬಾಲ್ಡ್ವಿನ್ ಶೂಟ್‌ ಮಾಡುವಾಗ, ಅದು ಗುರಿ ತಪ್ಪಿ, ಚಿತ್ರದ ಫೋಟೋಗ್ರಫಿ ನಿರ್ದೇಶಕಿ ಹೆಲಿನಾ ಅವರಿಗೆ ತಾಕಿದೆ. ಗಂಭೀರ ಗಾಯಗೊಂಡ ಅವರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

ನಿರ್ದೇಶಕ ಜೋಯೆಲ್‌ ಸೌಜಾಗೂ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಬಗ್ಗೆ ಮೆಕ್ಸಿಕೋದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ಬಾಲ್ಡ್ವಿನ್ ಅವರು ತಮ್ಮಿಂದಾದ ಅಚಾತುರ್ಯಕ್ಕೆ ಕಣ್ಣೀರು ಹಾಕಿದ್ದಾರೆ.

Leave a Reply

error: Content is protected !!