Please assign a menu to the primary menu location under menu

Technology

ಗೋಪೈಸಾ ಕರ್ನಾಟಕದಿಂದ ಒಟ್ಟಾರೆ ಮಾರಾಟದ ಶೇಕಡಾ 35 ನೋಂದಾಯಿಸಿದೆ

ಗೋಪೈಸಾ ಕರ್ನಾಟಕದಿಂದ ಒಟ್ಟಾರೆ ಮಾರಾಟದ ಶೇಕಡಾ 35 ನೋಂದಾಯಿಸಿದೆ

ಭಾರತದಲ್ಲಿ ಕ್ಯಾಶ್ ಬ್ಯಾಕ್ ಮತ್ತು ಕೂಪನ್ ಗಳ ವೆಬ್ ಸೈಟ್ ಆಗಿರುವ, ಗೋಪೈಸಾ, 3.5 ದಶಲಕ್ಷಕ್ಕೂ ಅಧಿಕ ನೋಂದಾಯಿತ ಬಳಕೆದಾರರಿಂದ ಹೆಚ್ಚುವರಿ ಉಳಿತಾಯವನ್ನು ಸಕ್ರಿಯಗೊಳಿಸಿದೆ. ಈ ಪ್ಲಾಟ್ ಫಾರ್ಮ್ ನಿಧಾನವಾಗಿ ದೇಶಾದ್ಯಂತ ಅನೇಕ ಆನ್ ಲೈನ್ ಶಾಪರ್ ಗಳಿಗೆ ಪ್ರಮುಖ ಹವ್ಯಾಸವಾಗುತ್ತಿದೆ. ಇಲ್ಲಿಯವರೆಗೆ ಪ್ಲಾಟ್ ಫಾರ್ಮ್ ಈಗಾಗಲೇ ಈ ಹಬ್ಬದ ಮಾರಾಟದಲ್ಲಿ 1 ಲಕ್ಷಕ್ಕೂ ಅಧಿಕ ಅರ್ಡರ್ ಗಳನ್ನು ಸಂಸ್ಕರಿಸಿದೆ.

ಗೋಪೈಸಾದ 27% ಗ್ರಾಹಕರು ಬೆಂಗಳೂರಿನವರಾಗಿದ್ದು, 34 ವರ್ಷದ ಗ್ರಾಹಕಿಯೊಬ್ಬರು ತಮ್ಮ ಅನುಭವವನ್ನು ಹೀಗೆ ಹೇಳಿದ್ದಾರೆ, ” ನಾನು ಈ ಪ್ಲಾಟ್ ಫಾರ್ಮ್ ಗೆ ನಿಯಮಿತ ಗ್ರಾಹಕಿಯಾಗಿದ್ದೇನೆ. ನಾನು ಒಂದು ವರ್ಷದ ಹಿಂದೆ ಮೊದಲ ಬಾರಿ ಬಳಸಿದಾಗ, ಕ್ಯಾಶ್ ಬ್ಯಾಕ್ ರೂಪದಲ್ಲಿ 200 ಹೆಚ್ಚುವರಿ ಉಳಿತಾಯ ಮಾಡಿದೆ. ಎರಡನೆಯ ಬಾರಿಗೆ ನಾನು ಪ್ಲಾಟ್ ಫಾರ್ಮ್ ಮೂಲಕ ಹೆಚ್ಚು ಆರ್ಡರ್ ಮಾಡಿದೆ, ಅದು ನಿಜಕ್ಕೂ ನನ್ನ ಒಟ್ಟು ಖರ್ಚಿನಲ್ಲಿ ಪ್ರಮುಖ ವ್ಯತ್ಯಾಸ ಉಂಟುಮಾಡಿತ್ತು. ಅಂದಿನಿಂದ ನಾನು ಯಾವುದೇ ಖರೀದಿ ಮಾಡುವ ಮೊದಲು ಗೋಪೈಸಾ ವೆಬ್ ಸೈಟ್ ಮೂಲಕ ಖರೀದಿಸುತ್ತಿದ್ದೇನೆ”.

ಒಟ್ಟು ಮಾರಾಟದ ಶೇಕಡಾ 40 ರಷ್ಟು ಕೊಡುಗೆ ನೀಡುವ ಮೂಲಕ ವೆಬ್ ಸೈಟ್ ದಕ್ಷಿಣ ಭಾರತದಲ್ಲಿ ಅತ್ಯದ್ಭುತ ಪ್ರತಿಕ್ರಿಯೆ ಪಡೆದಿದೆ.

“ನನ್ನ ಸಹೋದರಿ ನನಗೆ ಗೋಪೈಸಾ ಪರಿಚಯಿಸಿದರು, ಸಮಯ ಕಳೆದಂತೆ ನನಗೆ ಇದು ಶಾಪಿಂಗ್ ಹವ್ಯಾಸವಾಯಿತು. ಈಗ ಮೊಬೈಲ್ ವ್ಯಾಲೆಟ್ ಬಳಸುವುದಕ್ಕಿಂತ ಭಿನ್ನವಾಗಿಲ್ಲ. ಅದೇ ರೀತಿ, ಗೋಪೈಸಾ ಯಾವುದೇ ಆನ್ ಲೈನ್ ಬ್ರಾಂಡ್ ಶಾಪಿಂಗ್ ಮತ್ತು ಹೆಚ್ಚುವರಿ ಕ್ಯಾಶ್ ಬ್ಯಾಕ್ ಪಡೆಯಲು ವೇದಿಕೆಯಾಗಿದೆ. ನಾನು ಈ ಕ್ಯಾಶ್ ಬ್ಯಾಕ್ ಅನ್ನು ಬ್ಯಾಂಕ್ ಖಾತೆಗೆ ಪಡೆಯಬಹುದಾಗಿದ್ದು, ಮತ್ತೆ ಖರ್ಚು ಮಾಡುವ ಅಗತ್ಯವಿಲ್ಲ ಎನ್ನುವುದು ಉತ್ತಮ ವಿಚಾರ. ಇದು ಒಟ್ಟಾರೆಯಾಗಿ ನನ್ನ ಅಧಿಕ ಶಾಪಿಂಗ್ ಅಗತ್ಯಗಳು ಮತ್ತು ವರ್ಗಗಳನ್ನು ಪೋಷಿಸುತ್ತಿದೆ. ಹೆಚ್ಚಾಗಿ, ನೀವು ಯಾವುದೇ ಸಂದರ್ಭಕ್ಕೆ ಬ್ರಾಂಡ್ ಶಾಪಿಂಗ್ ಮಾಡುವಾಗ, ನಿಮ್ಮ ಹೆಚ್ಚಿನ ಖರ್ಚನ್ನು ಉಳಿಸುತ್ತದೆ” ಎಂದು ಬೆಂಗಳೂರಿನ ಗೋಪೈಸಾ ಗ್ರಾಹಕರಾದ ಅಶುತೋಷ್ ಹೇಳಿದ್ದಾರೆ.

ಬ್ರಾಂಡ್ ಪ್ರತೀ ತಿಂಗಳೂ 20% ನಷ್ಟು ಪ್ರಮಾಣದಲ್ಲಿ ಅನೇಕ ಆರ್ಡರ್ ಗಳನ್ನು ಪಡೆಯುತ್ತಿದೆ. ಬೆಳೆಯುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು, ಇದು ವಿವಿಧ ಸಾವಯವ ಮತ್ತು ಜವಾಬ್ದಾರಿಯುತ ಹಬ್ಬದ ಉಡುಗೊರೆ ಆಯ್ಕೆಗಳನ್ನು ನೀಡುವ ಯೋಜನೆಯನ್ನೂ ಹೊಂದಿದೆ.
ಹಬ್ಬದ ಸಮಯ ಬರುತ್ತಿದ್ದು, ಗ್ರಾಹಕರು ಎಲೆಕ್ಟ್ರಾನಿಕ್ಸ್, ಫ್ಯಾಶನ್, ಫಿಟ್ನೆಸ್ ನಂತಹ ವರ್ಗಗಳಲ್ಲಿ ಹೆಚ್ಚು ಆಸಕ್ತರಾಗಿರುವುದು ಕಂಡುಬಂದಿದೆ.

ಗೋಪೈಸಾ ಕುರಿತು

ನವದೆಹಲಿಯಲ್ಲಿ 2012 ರಲ್ಲಿ ಆರಂಭವಾದ GoPaisa.com ಇ-ವಾಣಿಜ್ಯ ವಲಯದಲ್ಲಿ ಉತ್ಪನ್ನ ಹಾಗೂ ಸರಕುಗಳ ಕಾರ್ಯನಿರ್ವಹಣೆ ಮಾಡುತ್ತಿದೆ. ಅಮನ್ ಜೈನ್ ಮತ್ತು ಅಂಕಿತಾ ಜೈನ್ ಎನ್ನುವ ಇಬ್ಬರು ಉದ್ಯಮಿಗಳಿಂದ ಆರಂಭವಾದ GoPaisa.com ಭಾರತದಲ್ಲಿ  ಕ್ಯಾಶ್ ಬ್ಯಾಕ್ ಮತ್ತು ಕೊಡುಗೆ ವರ್ಗದಲ್ಲಿ ಪ್ರಮುಖ ವಲಯವಾಗಿದೆ. GoPaisa.com ನಲ್ಲಿ ಲಭ್ಯವಿರುವ ಕ್ಯಾಶ್ ಬ್ಯಾಕ್ ಕೊಡುಗೆಗಳು ಮತ್ತು ಕೂಪನ್ ಗಳು ಶಾಪರ್ ಗಳಿಗೆ ತಮ್ಮ ಖಾತೆಗೆ ಆನ್ ಲೈನ್ ರೀಟೇಲರ್ ಗಳಿಂದ ನೀಡಲಾಗುವ ಸಂಪೂರ್ಣ ಕಮೀಷನ್ ಮೊತ್ತ ನೀಡುತ್ತವೆ. ಆನ್ ಲೈನ್ ರೀಟೇಲರ್ ಗಳಿಗೆ, ಪ್ಲಾಟ್ ಫಾರ್ಮ್ ತಮ್ಮ ಉತ್ಪನ್ನಗಳು ಹಾಗೂ ಸಂಬಂಧಿತ ಡೀಲ್ ಗಳು, ರಿಯಾಯಿತಿಗಳು ಮತ್ತು ಕೂಪನ್ ಕೋಡ್ ಗಳನ್ನು ಪ್ರಚಾರ ಮಾಡುವ ಬೃಹತ್ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.


Leave a Reply

error: Content is protected !!