Please assign a menu to the primary menu location under menu

State

ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು : ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ  3 % ಹೆಚ್ಚಳ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
01 ಜುಲೈ 2021 ರಂತೆ ಪೂರ್ವಾನ್ವಯ ಆಗುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತುಟ್ಟಿ ಭತ್ಯೆ ಹೆಚ್ಚಳ ಮಂಜೂರು ಮಾಡಿದ್ದಾರೆ.
ಸಂಘವು ಮನವಿ ಸಲ್ಲಿಸಿದ 24 ಗಂಟೆಗಳೊಳಗೆ ಕೇಂದ್ರ ಸರಕಾರ ಮಂಜೂರು ಮಾಡಿದ ತುಟ್ಟಿ ಭತ್ಯೆಗೆ ಸರಿಸಮವಾಗಿ ಮಂಜೂರು ಮಾಡಿ ಇತಿಹಾಸ ನಿರ್ಮಿಸಿದ ಮುಖ್ಯಮಂತ್ರಿಗಳಿಗೆ ಸಮಸ್ತ ರಾಜ್ಯ ಸರಕಾರಿ ನೌಕರರ ಪರವಾಗಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್.ಷಡಕ್ಷರಿ ಅವರು ಧನ್ಯವಾದ ಹೇಳಿದ್ದಾರೆ.
ಹೆಚ್ಚಳದಿಂದಾಗಿ ನೌಕರರ ಮೂಲ ವೇತನದ  21.50% ರಷ್ಟಿದ್ದ ತುಟ್ಟಿ ಭತ್ಯೆಯನ್ನು24.50% ಕ್ಕೆ ಏರಿಸಲಾಗಿದೆ.

Leave a Reply

error: Content is protected !!