Please assign a menu to the primary menu location under menu

National

ಪಟಾಕಿ ಸಿಡಿಸಲು ಈ ರಾಜ್ಯಗಳಲ್ಲಿದೆ ನಿರ್ಬಂಧ…!

ಪಟಾಕಿ ಸಿಡಿಸಲು ಈ ರಾಜ್ಯಗಳಲ್ಲಿದೆ ನಿರ್ಬಂಧ…!

ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ರಾಜ್ಯ ಸರ್ಕಾರಗಳು ಸಜ್ಜಾಗಿವೆ. ಕೆಲ ರಾಜ್ಯಗಳಲ್ಲಿ ಪಟಾಕಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೆಲವು ರಾಜ್ಯ ಸರ್ಕಾರಗಳು ಹಸಿರು ಪಟಾಕಿಗಳನ್ನು ಸುಡಲು ಅನುಮತಿ ನೀಡಿವೆ. ಆದ್ರೆ ಸಮಯ ನಿಗದಿ ಮಾಡಲಾಗಿದೆ.

ಪಟಾಕಿ ಹಚ್ಚುವುದ್ರಿಂದ ಜನನಿಬಿಡ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಚಳಿಗಾಲದಲ್ಲಿ ವಾಯ ಮಾಲಿನ್ಯ ಹೆಚ್ಚಾಗುತ್ತದೆ. ಕೊರೊನಾ ವೈರಸ್  ಮಧ್ಯೆ ಪಟಾಕಿ ಹೆಚ್ಚುವುದು ಹೆಚ್ಚು ಅಪಾಯಕಾರಿ. ಮಾಲಿನ್ಯದಿಂದಾಗಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡು ಹಲವು ರಾಜ್ಯ ಸರ್ಕಾರಗಳು ಪಟಾಕಿ  ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ಧರಿಸಿವೆ. ಖರೀದಿ ಮತ್ತು ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ. ದೆಹಲಿಯಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಡಿಶಾ ಸರ್ಕಾರವೂ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ.

ರಾಜಸ್ಥಾನದಲ್ಲಿ ಹಸಿರು ಪಟಾಕಿಗಳನ್ನು ಎರಡು ಗಂಟೆ ಮಾತ್ರ ಹಚ್ಚಬಹುದು ಎಂದು ಸರ್ಕಾರ ಹೇಳಿದೆ. ಇನ್ನು ಪಂಜಾಬ್‌ನಲ್ಲಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಹಸಿರು ಪಟಾಕಿ ಸುಡಲು ಅನುಮತಿ ನೀಡಲಾಗಿದೆ. ರಾತ್ರಿ 8 ರಿಂದ 10 ರವರೆಗೆ ಪಟಾಕಿ ಹಚ್ಚಬಹುದು ಎಂದು ಸರ್ಕಾರ ಹೇಳಿದೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಲವಾರು ರಾಜ್ಯಗಳು, ಕೆಲವು ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿವೆ.

 


Leave a Reply

error: Content is protected !!