Crime News

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಜನಸ್ಪಂದನ ಕಾರ್ಯಕ್ರಮ”

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಜನಸ್ಪಂದನ ಕಾರ್ಯಕ್ರಮ”

City Big News Desk.

ಜಯನಗರ ವಿಧಾನಸಭಾ ಕ್ಷೇತ್ರದ ಜೆ.ಪಿ.ನಗರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘ(ರಿ). ಬಯಲು ರಂಗ ಮಂದಿರದಲ್ಲಿ ನಡೆಸಲಾಯಿತು.

ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಮಾತನಾಡಿ, ಪಾಲಿಕೆ ವತಿಯಿಂದ ಸುಮಾರು ವರ್ಷದಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕೆಲ ನಾಗರಿಕರು ಮಾರೆನಹಳ್ಳಿಯ ವಾಡ್೯ ರಸ್ತೆಯ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಈ ಸಂಬಂಧ ಕೂಡಲೇ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಪ್ರತಿ ವಾರ್ಡವಾರು ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡಲಾಗುತ್ಯಿದೆ. ಪೌರಕಾರ್ಮಿಕರು ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸುತ್ತಿದ್ದಾತೆ. ಜೆಪಿನಗರ ಹೋಟೆಲ್ ರೆಸ್ಟೋರೆಂಟ್ ಗಳು ವಾಣಿಜ್ಯ ವಹಿವಾಟು ಹೆಚ್ಚಾಗಿದ್ದು, ಇದರಿಂದ ತ್ಯಾಜ್ಯ ಪ್ರಮಾಣ ಹೆಚ್ಚಾಗಿದೆ. ಈ ಪರಿಣಾಮ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಸದರಿಯವರು ಬಲ್ಕ್ ಜನರೇಟರ್ ಅಡಿಯಲ್ಲಿ ಬರುವುದರಿಂದ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅವರೆ ಸಂಗ್ರಹಿಸಿ ತೆರವು ಮಾಡಬೇಕು. ಅದರ ಬದಲಾಗಿ ಬಲ್ಕ್ ಜನರೇಟರ್ ಅಡಿಯಲ್ಲಿ ಗುರುತಿಸುಕೊಳ್ಳದೆ ವಾಡ್೯ವಾರು ಇರುವ ಘನತ್ಯಾಜ್ಯ ಘಟಕಗಳಿಗೆ ಹಾಗೂ ರಸ್ತೆಯ ಮೇಲೆ ತ್ಯಾಜ್ಯವನ್ನು ಹಾಕುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಗಮನವರಿಸಿ ತಕ್ಷಣವೇ ಬಲ್ಕ್ ಜನರೇಟರ್ ಅಡಿಯಲ್ಲಿ ಸದರಿ ಹೋಟೆಲ್ ರೆಸ್ಟೋರೆಂಟ್ ಗಳನ್ನು ತರಬೇಕು. ಬಲ್ಕ್ ಜನರೇಟರ್ ಅಡಿಯಲ್ಲಿ ಗುರುತಿಸಿಕೊಳ್ಳದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ನೇರವಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲಿಕರಿಗೆ ಮೇಲೆ ನೋಟಿಸ್ ನೀಡಿ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಾಗರಿಕರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದೇ ಮೊದಲು ದಕ್ಷಿಣ ವಲಯದಲ್ಲಿ ಪ್ರತಿ ರಸ್ತೆಯಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಸಾರ್ವಜನಿಕರು ರಸ್ತೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಕ್ಯೂ ಆರ್ ಕೋಡ್ ಮುಖಾಂತರ ಪಡೆಯ ಬಹುದಾಗಿದೆ.

ಯಾವುದೇ ಅಧಿಕಾರಿಗಳು ವರ್ಗಾವಣೆ ಗೊಂಡಿದ್ದರೆ ಸಂಬಂಧಪಟ್ಟ ವಿಭಾಗದ ಹೊಸ ಅಧಿಕಾರಿಗಳ ವಿವರ ಪಡೆಯಬಹುದಾದ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದರು.

ಸ್ಥಳೀಯ ಶಾಸಕರಾದ ಶ್ರೀ ಸಿ.ಕೆ ರಾಮಮೂರ್ತಿ ರವರು ಮಾತನಾಡಿ, ನಾಗರಿಕರು ಯಾವುದೇ ಸಮಸ್ಯೆವಿದ್ದರೂ ಬಗೆಹರಿಸಲಾಗುವುದು. ಇನ್ನು ಮುಂದೆ ವಾರ್ಡ್ ವಾರು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ನಡೆಸಲಾಗುವುದು ಹಾಗೂ ಘನತ್ಯಾಜ್ಯ ಸಮಸ್ಯೆಯನ್ನು ನಿವಾರಿಸಲು ಕಸ ಮುಕ್ತ ಕಾರ್ಯಕ್ರಮ ನಡೆಸಲಾಗುವುದು. ಒಟ್ಟಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಮಾದರಿ ಕ್ಷೇತ್ರ ಮಾಡಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಮಾತನಾಡಿ, ಪ್ರತಿ ವಾರ್ಡ್ ನ ನಾಗರಿಕರು ಅವರವರ ಮನೆಯ ಮುಂದೆ ಸ್ವಚ್ಚತೆ ಕಾಪಾಡಬೇಕು ಆಗಲೇ ವಾಡ್೯ ಅನ್ನು ಸ್ವಚ್ಚವಾಗಿಡಲು ಸಾಧ್ಯ. ನಾಗರಿಕರು ನಮ್ಮ ಜೊತೆಗೂಡಿದರೆ ಮಾದರಿಯ ಕ್ಷೇತ್ರ ಮಾಡಬಹುದೆಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಸಿ.ಕೆ.ರಾಮಮೂರ್ತಿ, ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ದಕ್ಷಿಣ ವಲಯ ಆಯುಕ್ತರಾದ, ಶ್ರೀ ಜಯರಾಮ್ ರಾಯಪುರ, ವಲಯ ಜಂಟಿ ಆಯುಕ್ತರಾದ ಡಾ.‌ ಕೆ.ಜಗದೀಶ್ ನಾಯ್ಕ್, ಪಾಲಿಕೆ, ಬೆಸ್ಕಾಂ, ಜಲಮಂಡಳಿ,‌ ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು, ಸ್ಥಳೀಯ ನಾಗರಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

City Big News.

Disclaimer: This Story is auto-aggregated by a Syndicated Feed and has not been Created or Edited By City Big News Staff.