Please assign a menu to the primary menu location under menu

State

ಚಾಮರಾಜನಗರ : ತಮಿಳು ಸಂಘದಿಂದ ಕನ್ನಡ ರಾಜ್ಯೋತ್ಸವ

ಚಾಮರಾಜನಗರ : ತಮಿಳು ಸಂಘದಿಂದ ಕನ್ನಡ ರಾಜ್ಯೋತ್ಸವ

ಚಾಮರಾಜನಗರ: ನಗರದ ತಮಿಳು ಸಂಘದ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಭಾಷಾ ಬಾಂಧವ್ಯ ಮೆರೆದರು.
ಕನ್ನಡ ಬಾವುಟ ಹಾರಿಸಿ, ನಾಡಗೀತೆ ಹಾಡಿ, ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಮಿಳು ಸಂಘದ ಅಧ್ಯಕ್ಷ ರಾ.ಜಗದೀಶನ್, ಪ್ರಧಾನವಾಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ತಮಿಳು ಭಾಷಿಗರು ದಶಕಗಳಿಂದ ಕರ್ನಾಟಕದಲ್ಲಿ ನೆಲೆಸಿ ಮಣ್ಣಿನ ಮಕ್ಕಳಾಗಿದ್ದೇವೆ. ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀ ಕುಡಿಯುವ ನೀರ್ ಕಾವೇರಿ’ ಎಂಬ ಕವಿವಾಣಿಯಂತೆ ನಾವು ಕನ್ನಡಮ್ಮನ ಮಕ್ಕಳಾಗಿದ್ದೇವೆ ಎಂದರು.

ತಮಿಳುಸಂಘದಿಂದ ಚಾಮರಾಜನಗರದಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ನಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತೇವೆ, ಮೂಲತಃ ನಾವು ತಮಿಳರಾದರೂ ಕನ್ನಡ ನೆಲದಲ್ಲಿ ಬೆರೆತುಹೋಗಿದ್ದೇವೆ ಎಂದು ನುಡಿದರು.

ರೈತ ಸಂಘದ ಚಿನ್ನಸ್ವಾಮಿ ಗೌಡರ್ ಮತ್ತಿತರ ತಮಿಳು ಸಂಘದ ಪದಾಧಿಕಾರಿಗಳು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.


Leave a Reply

error: Content is protected !!