
ಬೆಂಗಳೂರು: ಕನ್ನಡ ಚಲನ ಚಿತ್ರರಂಗದಲ್ಲಿ ಇತ್ತೀಚಿಗೆ ಮೂಡಿ ಬರಿತ್ತಿರುವ ಸಿನಿಮಾಗಳು ಕಥೆ ಆಧಾರಿತ ಸಿನಿಮಾಗಳಾಗಿವೆ, ಇದನ್ನು ಅಭಿಮಾನಿಗಳು ಹೆಚ್ಚು ವೀಕ್ಷಣೆ ಮಾಡುತ್ತಿದಾರೆ. ಕಥೆ ಆಧಾರಿತ ಸಿನಿಮಾಗಳು ಸ್ಯಾಂಡಲ್ ವುಡ್ ನನ್ನು ಅತಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದೆ.
ಇವುಗಳ ಪೈಕಿ ಕೆಲವೊಂದು ಬ್ಲಾಕ್‌ಬಸ್ಟರ್ ಎಂದು ಸಾಬೀತಾದರೆ ಹಲವು ಫ್ಲಾಪ್ ಆಗಿರುವುದುಂಟು. ಒಂದು ಚಿತ್ರ ಹೀಗೆಯೇ ಕಮಾಯಿ ಮಾಡುತ್ತದೆ ಎಂದು ಹೇಳುವುದು ಬಹಳ ಕಷ್ಟವೇ ಕಷ್ಟವೇ. ಅತ್ಯಂತ ಕಡಿಮೆ ಬಂಡವಾಳ ಚಿತ್ರವು ನಿರೀಕ್ಷೆಗೂ ಮೀರಿ ಬಹು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ. ಇದಕ್ಕೆ ತಕ್ಕ ಮಾದರಿಯೆಂದರೆ ಅದು ಕಾಂತಾರ ಸಿನಿಮಾ.
ಸಿನಿ ಕ್ಷೇತ್ರದಲ್ಲಿ ಕಾಂತಾರ ಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ತೆರೆಕಂಡಾಗ ಕೇವಲ ಕನ್ನಡ ಸಿನಿಮಾವಾಗಿತ್ತು. ಆದರೆ ನಂತರ ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿಂಚಿತು. ಸ್ಯಾಂಡಲ್ವುಡ್ ನೆಲದಿಂದ ವಿಶ್ವಾದ್ಯಂತ ಕನ್ನಡದ ಕಂಪನ್ನು ಪಸರಿಸಿದೆ. ಕಾಂತಾರ ಇನ್ನೂ ಹೆಚ್ಚು ಹೆಸರು ಮಾಡಲು ಕಾರಣವೆಂದರೆ ಅತ್ಯಂತ ಕಡಿಮೆ ಬಜೆಟ್ನಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದಕ್ಕೆ ಖರ್ಚು ಮಾಡಿದ್ದು ಕೇವಲ 16 ಕೋಟಿ ರೂಪಾಯಿ.
ಕಾಂತಾರ2 ಬಜೆಟ್ ಬಗ್ಗೆ. ಕಾಂತಾರ1 ಚಿತ್ರ16 ಕೋಟಿ ರೂಪಾಯಿಗಳಲ್ಲಿ ಮಾಡಿದ್ದರೆ ಕಾಂತಾರ2 125 ಕೋಟಿ ರೂಪಾಯಿ ಬಂಡವಾಳದಲ್ಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಅಂದರೆ ಮೊದಲಿಗಿಂತಲೂ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಎರಡನೆಯ ಭಾಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.