Please assign a menu to the primary menu location under menu

Sports

BIG NEWS: ನ್ಯೂಜಿಲೆಂಡ್​ ವಿರುದ್ಧದ T20 ಸರಣಿಯಲ್ಲಿ ಟೀಂ ಇಂಡಿಯಾಗೆ ಕೆ.ಎಲ್.​ ರಾಹುಲ್​ ಸಾರಥ್ಯ….?

BIG NEWS: ನ್ಯೂಜಿಲೆಂಡ್​ ವಿರುದ್ಧದ T20 ಸರಣಿಯಲ್ಲಿ ಟೀಂ ಇಂಡಿಯಾಗೆ ಕೆ.ಎಲ್.​ ರಾಹುಲ್​ ಸಾರಥ್ಯ….?

ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್​ ವಿರುದ್ಧದ ಟಿ 20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಸ್ಥಾನವನ್ನು ಕೆ.ಎಲ್.​ ರಾಹುಲ್​ ವಹಿಸಲಿದ್ದಾರೆ ಎನ್ನಲಾಗಿದೆ. ಈ ಸರಣಿಯು ನವೆಂಬರ್​ 17ರಿಂದ ಜೈಪುರದಲ್ಲಿ ಆರಂಭಗೊಳ್ಳಲಿದೆ. ಬಳಿಕ ನವೆಂಬರ್​ 19 ಹಾಗೂ 21ರಂದು ಕ್ರಮವಾಗಿ ರಾಂಚಿ ಹಾಗೂ ಕೊಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ನವೆಂಬರ್​ 25-29ರಂದು ಕಾನ್ಪುರದಲ್ಲಿ ಹಾಗೂ ಡಿಸೆಂಬರ್​ 3-7ರಂದು ಮುಂಬೈನಲ್ಲಿ 2 ಟೆಸ್ಟ್​ ಪಂದ್ಯಗಳು ನಡೆಯಲಿವೆ.

ಟಿ 20 ವರ್ಲ್ಡ್​ ಕಪ್​ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪರ ಆಟವಾಡುತ್ತಿರುವ ಎಲ್ಲಾ ಆಟಗಾರರು ಕಳೆದ ವರ್ಷದಿಂದ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಐಪಿಎಲ್​ ಪಂದ್ಯದ ಮುಗಿಯುತ್ತಿದ್ದಂತೆ ಆಟಗಾರರು ಟಿ 20 ವರ್ಲ್ಡ್​ ಕಪ್​ ಪಂದ್ಯಕ್ಕೆ ತೆರಳಿದ್ದಾರೆ. ಹೀಗಾಗಿ ಟೀ ಇಂಡಿಯಾದ ಮೊದಲ ಆಯ್ಕೆಯ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಕೆ.ಎಲ್​ ರಾಹುಲ್​ ಈ ಪಂದ್ಯದ ಸಾರಥ್ಯ ವಹಿಸುವುದು ಬಹುತೇಕ ಪಕ್ಕಾ ಆಗಿದೆ.

ಹಿರಿಯ ಆಟಗಾರರಿಗೆ ನಿಜಕ್ಕೂ ವಿಶ್ರಾಂತಿಯ ಅಗತ್ಯವಿದೆ. ಟಿ 20 ಸರಣಿಯಲ್ಲಿ ರಾಹುಲ್​ ಕೂಡ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇವರು ತಂಡವನ್ನು ಮುನ್ನಡೆಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.


Leave a Reply

error: Content is protected !!