Please assign a menu to the primary menu location under menu

State

ಗೋ ಕಳ್ಳತನ ಪ್ರಕರಣ ಭೇದಿಸಿದ ಸಾಗರ ಪೊಲೀಸರು : ಐವರ ಬಂಧನ

ಗೋ ಕಳ್ಳತನ ಪ್ರಕರಣ ಭೇದಿಸಿದ ಸಾಗರ ಪೊಲೀಸರು : ಐವರ ಬಂಧನ

ಸಾಗರ: ಕೆಲವು ದಿನಗಳ ಹಿಂದೆ ನಗರದ ಮಾರಿಕಾಂಬಾ ದೇವಸ್ಥಾನದ ಬಳಿ ಕಾರಿನಲ್ಲಿ ಬಂದು ಗೋವನ್ನು ಕದ್ದೊಯ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಾಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರಿಕಾಂಬಾ ದೇವಸ್ಥಾನ ಬಳಿ ಮಧ್ಯರಾತ್ರಿ ಕಾರಿನಲ್ಲಿ ಬಂದು, ಮಲಗಿದ್ದ ಗೋವುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದುದು ವೈರಲ್ ಆಗಿತ್ತು. ಈ ಬಗ್ಗೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಗೋ ಕಳ್ಳರನ್ನು ಶೀಘ್ರ ಬಂಧಿಸುವಂತೆ ಪ್ರತಿಭಟನೆ ಸಹ ಮಾಡಿತ್ತು. ಈ ಸಂಬಂಧ ದೂರು ಕೂಡ ದಾಖಲಾಗಿತ್ತು.

ಶಾಸಕ ಎಚ್. ಹಾಲಪ್ಪ ಹರತಾಳು ಅವರ ಬಲವಾದ ಸೂಚನೆ, ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧರಿಸಿ ಒಂದು ವಾರದ ಒಳಗಾಗಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಳ್ಳತನಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನ ವಶಕ್ಕೆ ಪಡೆದಿದ್ದು, ಆರೋಪಿಗಳಾದ ಅಮಾನ್, ದಸ್ತಗಿರ್, ತನ್ನು, ರೋಹಿದ್, ಫೈಜಲ್ ಇವರನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಶಿವಮೊಗ್ಗ ಹಾಗೂ ಓರ್ವ ಮಂಗಳೂರು ಮೂಲದವನು ಎನ್ನಲಾಗಿದೆ.

ಡಿವೈಎಸ್ಪಿ ವಿನಾಯಕ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಿರೀಶ್, ನಗರ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದ ತಂಡದಲ್ಲಿ ಕಾರ್ಗಲ್ ಪೋಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್, ಸಿಬ್ಬಂದಿಯಾದ ಸಂತೋಷ್ ನಾಯ್ಕ್, ಹಜರತ್ ಅಲಿ, ಶ್ರೀಧರ್, ಅಶೋಕ್, ಮಲ್ಲೇಶ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Leave a Reply

error: Content is protected !!