Please assign a menu to the primary menu location under menu

State

ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಸಮಾಧಿಗೆ ಹಾಲು ತುಪ್ಪದ ಶಾಸ್ತ್ರ

ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಸಮಾಧಿಗೆ ಹಾಲು ತುಪ್ಪದ ಶಾಸ್ತ್ರ

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ಚಿರ ನಿದ್ರೆಗೆ ಜಾರಿರುವ ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಇಂದು ಬೆಳಿಗ್ಗೆ ಹಾಲು ತುಪ್ಪ ಅರ್ಪಿಸುವ ಕಾರ್ಯಕ್ರಮ ನೆರವೇರಿತು.

ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 5 ದಿನಗಳಾಗಿದ್ದು, ಕುಟುಂಬದ‌ ಸಂಪ್ರದಾಯದ ಪ್ರಕಾರ ಇಂದು ಬೆಳಿಗ್ಗೆ 10.30. ರ‌ ಸುಮಾರಿಗೆ ಶಾಸ್ತೋಕ್ರವಾಗಿ ಸಮಾಧಿಗೆ ಹಾಲು ತುಪ್ಪ ಸಮರ್ಪಿಸಲಾಯಿತು.

ಸಹೋದರರಾದ ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಇಬ್ಬರು ಪುತ್ರಿಯರು, ಕುಟುಂಬ ವರ್ಗ ಸೇರಿದಂತೆ ಆಪ್ತ ಬಳಗ ಭಾಗಿಯಾಗಿತ್ತು.

ಇಂದು ಹಾಲು- ತುಪ್ಪ ಕಾರ್ಯದ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಸ್ಟುಡಿಯೋ ಮುಂದೆ ಜಮಾಯಿಸುತ್ತಿದ್ದು, ಆದರೆ ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಾರೆ. ಸ್ಟುಡಿಯೋದ ಸುತ್ತಮುತ್ತ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಗಾಗಿ ಸ್ಥಳೀಯ ಪೊಲೀಸರು,ಕೆಎಸ್​ಆರ್​ಪಿ ತುಕಡಿ, ಆರ್​ಎಎಫ್ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದಿನ ಕಾರ್ಯಕ್ರಮದ ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ದೊರೆಯಲಿದೆ.

ಪುನೀತ್ ಅವರು ನಿಧನವಾದ ದಿನದಿಂದ ಅಂತ್ಯಕ್ರಿಯೆ ಮುಗಿಯುವವರೆಗೂ ಮೂರು ದಿನಗಳ ಕಾಲ ಸ್ಥಳದಲ್ಲಿಯೇ ಇದ್ದು ನಿರ್ವಹಣೆ ಮಾಡಿದ್ದ  ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply

error: Content is protected !!