Please assign a menu to the primary menu location under menu

State

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಬೆಂಗಳೂರು: ಒಂದು ಕಾಲದಲ್ಲಿ ಹಿಂದುಳಿದವರು,ದಲಿತರು ಮತ್ತು ಅಲ್ಪ ಸಂಖ್ಯಾತರು ಕಾಂಗ್ರೆಸ್‌ ಜತೆಯಲ್ಲಿ ಇದ್ದರು. ಆದರೆ ಈಗ ಹಿಂದುಳಿದ ವರ್ಗದವರು ಮತ್ತು ದಲಿತರು ಶೇ.80ಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಜತೆ ಇದ್ದಾರೆ. ಹಾಗೆಯೇ ರಾಷ್ಟ್ರೀಯವಾದಿ ಮುಸಲ್ಮಾನರು ಕೂಡ ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಿಜೆಪಿಯ ರಾಜ್ಯ ಒಬಿಸಿ ಮೋರ್ಚಾ ಬುಧವಾರ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಮುಖಂಡರು ಅಭಿವೃದ್ದಿ ಕೇಂದ್ರಿಕರಿಸಿ ಮಾತನಾಡುವುದಿಲ್ಲ ಜಾತಿವಾದಿ ಮತಗಳ ಲೆಕ್ಕಚಾರದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿರುವ ಒಳ್ಳೆ ಕೆಲಸಗಳಿಗೆ ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡುತ್ತಿರುವ ಉತ್ತಮ ಕಾರ್ಯಗಳನ್ನು ಮೆಚ್ಚಿ ಜನರು ಬಿಜೆಪಿಗೆ ವೋಟ್‌ ಹಾಕುತ್ತಾರೆ.ಪ್ರಧಾನಿ ನರೇಂದ್ರ ಮೋದಿ ಯಾವ ಜಾತಿ, ಸಿಎಂ ಬೊಮ್ಮಾಯಿ ಯಾವ ಜಾತಿ, ಶಾಸಕ ಯಾವ ಜಾತಿ ಎಂದು ನೋಡಿ ಮತಹಾಕುವುದಿಲ್ಲ ಎಂದರು.

ಕುರುಬರ ವೋಟ್‌ ಪಡೆಯಲು ಅಲ್ಲ:
ರಾಜ್ಯದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿವೆ.ಆದರೆ ಕನಕದಾಸ, ಸಂಗೊಳ್ಳಿ ರಾಯಣ್ಣ ಅವರನ್ನು ನೆನಪಿಸಲು ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು. ಕನಕಸದಾಸರ ಜಯಂತಿ ಆಚರಣೆ ಹಾಗೂ ಸರ್ಕಾರಿ ರಜೆ ಘೋಷಣೆ ಮಾಡಿದ್ದು ಕುರುಬರ ವೋಟ್‌ ಪಡೆಯಲು ಅಲ್ಲ.ಬದಲಾಗಿ ಕನಕದಾಸರ ತತ್ವ ಸಿದ್ದಾಂತಗಳನ್ನು ಜನರಿಗೆ ತಲುಪಿಸುವುದಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಮತ್ತು ಹಿಂದುಳಿದ ಸಮುದಾಯದ 47 ಮಂದಿಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಆ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳ ಏಳ್ಗೆಗೆ ಆದ್ಯತೆ ನೀಡಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂದುಳಿದ ವರ್ಗದವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ತಲುಪಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಮಠ ಮಾನ್ಯಗಳಿಗೆ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತಷ್ಟು ಅನುದಾನ ನೀಡಲಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಮೋರ್ಚಾದ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಹಿಂದುಳಿದ ವರ್ಗಗಳ ಅಭಿವೃದ್ದಿಯಾಗಿಲ್ಲ.ಇದಕ್ಕೆ ನಮ್ಮನ್ನಾಳಿದ ಸರ್ಕಾರಗಳೆ ಕಾರಣ ಎಂದರು. ಬಿಜೆಪಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ ಪಾಲ್‌ ಎ ಸುವರ್ಣ, ವಿಧಾನ ಪರಿಷತ್ತಿನ ಸದಸ್ಯ ರಘುನಾಥ್‌ ಮಲ್ಕಾಪುರೆ, ಮಾಜಿ ಸಂಸದ ವೀರೂಪಾಕ್ಷಪ್ಪ, ವಿಜಯಶಂಕರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಂಬಳಿ ಬಗ್ಗೆ ಇದ್ದಕ್ಕಿದ್ದ ಹಾಗೆ ನೆನಪು ಏಕೆ?
ಕೆಲವರಿಗೆ ಕಂಬಳಿ ಬಗ್ಗೆ ಇದ್ದಕ್ಕಿದ್ದ ಹಾಗೆ ನೆನಪಾಗಿದೆ.ಈಗಾಗಲೇ ಹಿಂದುಳಿದ ವರ್ಗದವರು ಕೈ ಕೊಟ್ಟಿದ್ದಾರೆ.ಕುರುಬರು ಕೈ ಬಿಡುತ್ತಾರೆ, ಅವರು ಉಳಿದು ಕೊಳ್ಳಲಿ ಎಂಬ ಕಾರಣದಿಂದಾಗಿ ಈಗ ಕಂಬಳಿ ಹೆಸರು ಶುರುಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿದೆ ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಬ್ಬೆಟ್ಟಿನ ಗಿರಾಕಿ ಅನ್ನುತ್ತಾರೆ ಮಾಜಿ ಮುಖ್ಯಮಂತ್ರಿ ಆದವರು ಈ ರೀತಿ ವಯಕ್ತಿ ಮಟ್ಟದ ಆರೋಪ ಮಾಡಬಾರದು ಎಂದರು.


Leave a Reply

error: Content is protected !!