Please assign a menu to the primary menu location under menu

National

ತೆಲುಗು ಚಿತ್ರರಂಗದ ಹಿರಿಯ ನಟ ನಂದಮುರಿ ಬಾಲಕೃಷ್ಣಗೆ ಶಸ್ತ್ರಚಿಕಿತ್ಸೆ

ತೆಲುಗು ಚಿತ್ರರಂಗದ ಹಿರಿಯ ನಟ ನಂದಮುರಿ ಬಾಲಕೃಷ್ಣಗೆ ಶಸ್ತ್ರಚಿಕಿತ್ಸೆ

ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ನಟ ನಂದಮುರಿ ಬಾಲಕೃಷ್ಣ ಅವರು ಮಂಗಳವಾರ ಹೈದರಾಬಾದ್‌ನ ಕೇರ್‌ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಬಾಲಕೃಷ್ಣ ಅವರು ಕಳೆದ ಆರು ತಿಂಗಳುಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಅದರಿಂದಾಗಿ ಭಾರ ಎತ್ತರುವುದಕ್ಕೂ ಆಗುತ್ತಿರಲಿಲ್ಲವೆಂದು ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದ್ದ ವೈದ್ಯರು, ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಾಗಿ ತಿಳಿಸಿದ್ದರು.

ಡಾ.ರಘುವೀರ್‌ ರೆಡ್ಡಿ ಮತ್ತು ಡಾ.ಬಿ.ಎನ್‌. ಪ್ರಸಾದ್‌ ಅವರ ತಂಡವು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದು, ಸದ್ಯ ಬಾಲಕೃಷ್ಣ ಅವರು ಆರೋಗ್ಯವಾಗಿದ್ದಾರೆ. ಕೆಲ ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸಾcರ್ಜ್‌ ಮಾಡುವುದಾಗಿ ತಿಳಿಸಲಾಗಿದೆ.


Leave a Reply

error: Content is protected !!