Please assign a menu to the primary menu location under menu

international

OMG: ಹೆಣ್ಣುಮಕ್ಕಳನ್ನು ಮಾರಿ ಜೀವನ ಸಾಗಿಸುತ್ತಿದೆ ಇಲ್ಲಿನ ಕುಟುಂಬ….!

OMG: ಹೆಣ್ಣುಮಕ್ಕಳನ್ನು ಮಾರಿ ಜೀವನ ಸಾಗಿಸುತ್ತಿದೆ ಇಲ್ಲಿನ ಕುಟುಂಬ….!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಳ್ವಿಕೆ ಆರಂಭವಾದಾಗಿನಿಂದ ಜನ ಸಾಮಾನ್ಯರ ಬಾಳು ನರಕಕ್ಕಿಂತ ಕಡೆಯಾಗಿದೆ. ಕಳೆದ ಕೆಲ ತಿಂಗಳುಗಳಿಂದ ಬಡತನ ಹಾಗೂ ಹಸಿವಿನಿಂದ ಬಳಲುತ್ತಿರುವ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ಹದಿಹರೆಯದ ಹೆಣ್ಣುಮಕ್ಕಳನ್ನು ಮಾರುತ್ತಿದೆ..!

ಇದೇ ರೀತಿಯ ಅಮಾನವೀಯ ಘಟನೆಯೊಂದರಲ್ಲಿ, 9 ವರ್ಷದ ಪರ್ವಾನಾ ಮಲ್ಲಿಕ್​ ಎಂಬಾಕೆಯನ್ನು ಆಕೆಯ ಕುಟುಂಬ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದೆ. ಜನ ಶಿಬಿರದಲ್ಲಿ ಆಶ್ರಯ ಪಡೆದಿರುವ ಪರ್ವಾನಾ ಕುಟುಂಬದಲ್ಲಿ 8 ಜನ ಇದ್ದಾರೆ. ತಾಲಿಬಾನ್ ಆಡಳಿತದ ಬಳಿಕ ಅವರ ಉದ್ಯೋಗ ಕೂಡ ಹೋಗಿದ್ದು ಹೀಗಾಗಿ ಪುಟ್ಟ ಬಾಲಕಿಯನ್ನು ಮಾರಾಟ ಮಾಡಿ ಆ ಕುಟುಂಬ ನಿರ್ವಹಣೆ ಮಾಡುತ್ತಿದೆ.

ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಾಯ್ಬಿಟ್ಟ ಪರ್ವಾನಾ ತಂದೆ ಅಬ್ದುಲ್ ಮಲ್ಲಿಕ್​, ಕೆಲ ತಿಂಗಳ ಹಿಂದಷ್ಟೇ ನಾನು ನನ್ನ ಇನ್ನೊಬ್ಬ 12 ವರ್ಷದ ಮಗಳನ್ನು ಮಾರಾಟ ಮಾಡಿದ್ದೆ. ಇದೀಗ ಕುಟುಂಬಸ್ಥರು ಬದುಕಿರಬೇಕು ಅಂದರೆ ಪರ್ವಾನಾಳನ್ನು ಮಾರಾಟ ಮಾಡೋದು ಅನಿವಾರ್ಯವಾಗಿತ್ತು. ಈ ನಿರ್ಧಾರಗಳಿಂದ ನಾನು ಜರ್ಜರಿತನಾಗಿದ್ದೇನೆ ಎಂದು ಹೇಳಿದ್ದಾನೆ.

ಪರ್ವಾನಾ ಕೂಡ ಈ ವಿಚಾರವಾಗಿ ಮಾತನಾಡಿದ್ದು, ನಾನು ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂದು ಕನಸು ಕಂಡಿದ್ದೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟವು ನನಗೆ ಎಲ್ಲಾ ಮಾರ್ಗಗಳನ್ನು ಬಂದ್​ ಮಾಡಿತು. ಈ ಮನುಷ್ಯ ನನಗೆ ಪ್ರತಿದಿನ ಥಳಿಸುತ್ತಾನೆ ಹಾಗೂ ಮನೆಯ ಎಲ್ಲಾ ಕೆಲಸಗಳನ್ನು ಮಾಡುವಂತೆ ಹಿಂಸಿಸುತ್ತಾನೆ ಎಂದು ಹೇಳಿದಳು.

ಎರಡು ದಿನಗಳ ಹಿಂದೆ ಮಲ್ಲಿಕ್​ ನಿವಾಸಕ್ಕೆ ಆಗಮಿಸಿದ್ದ 55 ವರ್ಷದ ಕುರುಬಾನ್​ ಎಂಬಾತ್, 2200 ಡಾಲರ್​ ಹಣ ನೀಡಿ ಪರ್ವಾನಾಳನ್ನು ಖರೀದಿ ಮಾಡಿದ್ದನು.


Leave a Reply

error: Content is protected !!