Please assign a menu to the primary menu location under menu

State

ಅಪ್ಪು ಸಮಾಧಿ ದರ್ಶನಕ್ಕೆ ಕಾತರಿಸುತ್ತಿದ್ದ ಅಭಿಮಾನಿಗಳಿಗೆ ಅವಕಾಶ

ಅಪ್ಪು ಸಮಾಧಿ ದರ್ಶನಕ್ಕೆ ಕಾತರಿಸುತ್ತಿದ್ದ ಅಭಿಮಾನಿಗಳಿಗೆ ಅವಕಾಶ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ವೀಕ್ಷಣೆಗೆ ಕೆಲವು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.

ಬೆಳಗ್ಗೆಯಿಂದಲೂ ಕಂಠೀರವ ಸ್ಟುಡಿಯೋ ಎದುರು ಕಾಯುತ್ತಿದ್ದ ಕೆಲವು ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದವರು ಅಂತ್ಯಕ್ರಿಯೆ ನೆರವೇರಿಸಿದ ನಂತರ ಸಮಾಧಿ ದರ್ಶನಕ್ಕೆ ಆಗಮಿಸಿದ್ದರು. ಆದರೆ, ಡಾ. ರಾಜಕುಮಾರ್ ಕುಟುಂಬದವರು ಹಾಲು ತುಪ್ಪ ಕಾರ್ಯ ನೆರವೇರಿಸದ ಕಾರಣ ಅಭಿಮಾನಿಗಳಿಗೆ ಪ್ರವೇಶ ಇರಲಿಲ್ಲ. ಇವತ್ತು ಹಾಲುತುಪ್ಪ ಕಾರ್ಯ ನೆರವೇರಿದೆ.

ಕಂಠೀರವ ಸ್ಟುಡಿಯೋ ಬಳಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಭದ್ರತೆಯ ನಡುವೆ ಬೆಳಗ್ಗೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.


Leave a Reply

error: Content is protected !!