Technology News

ಅಗೆದ ರಸ್ತೆಗಳನ್ನು ಮುಚ್ಚುವಲ್ಲಿ ಕಳಪೆ ಕಾಮಗಾರಿ; ಸಾರ್ವಜನಿಕರಿಗೆ ತೊಂದರೆ

ಅಗೆದ ರಸ್ತೆಗಳನ್ನು ಮುಚ್ಚುವಲ್ಲಿ ಕಳಪೆ ಕಾಮಗಾರಿ; ಸಾರ್ವಜನಿಕರಿಗೆ ತೊಂದರೆ

ಮರಿಯಮ್ಮನಹಳ್ಳಿ: ಪಾವಗಡ ಪಟ್ಟಣಕ್ಕೆ ತುಂಗಾಬದ್ರ ನದಿಯಿಂದ ಕುಡಿಯುವ ನೀರಿರನ್ನು ಒಯ್ಯುವುದಕ್ಕಾಗಿ ಪಟ್ಟಣದ ಮದ್ಯಭಾಗದ ಸಿಸಿ ರಸ್ತೆಯನ್ನು ಅಗೆದು ಪೈಪನ್ನು ಅಳವಡಿಸಲಾಗಿದೆ. ಣಾಣಿಕೆರಿ ವೃತ್ತದಿಂದ ವೆಂಕಟಾಪುರ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಅಗೆದು ಸರಿಯಾದ ರೀತಿಯಲ್ಲಿ ಮುಚ್ಚದಿರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿಗಳಾಗಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದ್ದು ಅಪಾಯದ ರಾಸ್ತೆಯಾಗಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ರಸ್ತೆಯನ್ನು ಕಳಪೆಯಾಗಿ ನಿರ್ಮಿಸಿದ್ದ ಪರಿಣಾಮ ಬಾನುವಾರ ಪಟ್ಟಣದ ನಾರಾಯಣ ದೇವರ ಕೆರೆ ವೃತ್ತದಿಂದ ವೆಂಕಟಾಪುರಕ್ಕೆ ಹೋಗುವ ರಸ್ತೆಯ ಮೇಲೆ ಟ್ರ್ಯಾಕ್ಟರ್ ಒಂದು ಕಲ್ಲು ತುಂಬಿಕೊಂಡು ಹೋಗುತ್ತಿರುವಾಗ ರಸ್ತೆ ಕುಸಿದ ಮರಿಣಾಮ ಟ್ರ್ಯಾಕ್ಟರ್ ನ ಹಿಂಬದಿ ಭಾಗ ಸಂಪೂರ್ಣ ಕುಸಿದು  ಬಿದ್ದಿರುವ ಘಟಣೆ ನಡೆದಿದೆ.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ, ಸುಮಾರು ಎರಡೂವರೆ ಸಾವಿರ ಕೋಟಿ ಮೊತ್ತದಲ್ಲಿ, ತುಂಗಭದ್ರ ನದಿಯಿಂದ ಪಾವಗಡ ಪಟ್ಟಣಕ್ಕೆ ನೀರನ್ನು ಹಾಯಿಸಿಕೊಂಡು ಹೋಗುವುದಕ್ಕಾಗಿ, 4 ಅಡಿ ವಿಸ್ತೀರ್ಣ, 20ಅಡಿ ಉದ್ದದ ಪೈಪನ್ನು ಅಳವಡಿಸಲು ಸುಮಾರು 10 ಅಡಿ ಆಳ, 9ಅಡಿ ಅಗಲ 1 ಕಿಲೋ ಮೀಟರ್ ಉದ್ದದವರೆಗೆ ರಸ್ತೆಯನ್ನು ಅಗೆದು ನೀರಿನ ಪೈಪ್ ಅಳವಡಿಸಿದ್ದಾರೆ. ಈ ಕಾಮಗಾರಿಯನ್ನು ಮೆಗಾ ಕನ್ಸ್ಟ್ರಕ್ಷನ್ ನವರು ವಹಿಸಿಕೊಂಡಿದ್ದು. ನೀರಿನ ಪೈಪ್ ಮುಚ್ಚಿದ ನಂತರ ಸುರಕ್ಷತೆಗಾಗಿ ರಸ್ತೆಯನ್ನು ಬಿಗಿಗೊಳಿಸಲು ಯಾವುದೇ ರೀತಿಯ ರೋಲಿಂಗ್ ಮಾಡದೆ, ಸಿಸಿ ರಸ್ತೆ ಮಾಡದೆ ಇರುವುದರಿಂದ ಇಂತಹ ಇಂತಹ ಘಟಣೆಗಳು ನಡೆಯುತ್ತಿವೆ ಪ್ರತಿ ದಿನಾ ವಾಹನ ಸವಾರರು, ಸಾರ್ವಜನಿಕರು ಭಯದಿಂದ ಓಡಾವುವಂತ ಪರಿಸ್ತಿತಿ ಎದುರಾಗಿದೆ.

ಮೇಲ್ಮಣ್ಣು ಹಾಕಿರುವುದರಿಂದ ರಸ್ತೆಯು ತೆಗ್ಗು ಗುಂಡಿಗಳಾಗಿ ಮಾರ್ಪಟ್ಟಿದೆ. ವಾಹನ ಸವಾರರು ಈ ತಗ್ಗು ಗುಂಡಿಗಳಿಂದ ರೋಸಿ ಹೋಗಿದ್ದಾರೆ. ಪಟ್ಟಣದಲ್ಲಿ ಇದು ಒಂದು ಮುಖ್ಯ ರಸ್ತೆ ಆಗಿರುವುದರಿಂದ ವೆಂಕಟಾಪುರ, ವ್ಯಾಸನಕೆರೆ, ಹಂಪಿನಕಟ್ಟೆ, ಅಯ್ಯನಹಳ್ಳಿ ಗ್ರಾಮಗಳಿಗೆ, ಶಾಲೆಗಳಿಗೆ ಮತ್ತು ಇತರ ಕೃಷಿ ಚಟುವಟಿಕೆಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ಜನದಟ್ಟಣೆಯಿಂದ ಕೂಡಿರುತ್ತದೆ. ರಸ್ತೆಯು ಕಳಪೆಯಾಗಿರುವುದರಿಂದ ಕಿರಿಕಿ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಪೈಪ್ ಹಾಕುವ ಕಾಮಗಾರಿ ಮುಗಿದು 1ವರ್ಷ ಕಳೆಯುತ್ತಾ ಬಂದರು ಯಾವುದೇ ಕ್ರಮ ವಹಿಸದಿರುವುದು ವಿಷಾಧಕರ. ಸದಾ ಜನದಟ್ಟಣೆ ನೆಯಿಂದ ಕೂಡಿರುವ ಈ ರಸ್ತೆ, ನಡುರಸ್ತೆಯಲ್ಲಿ ಟ್ರ್ಯಾಕ್ಟರ್ ನ ಹಿಂಬದಿ ಭಾಗ ಸಂಪೂರ್ಣ ಕುಸಿದಿರುವುದು ಗುತ್ತಿಗೆದಾರರ ಕಳಪೆ ಮತ್ತು ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಅದೃಷ್ಟಾವಷಾತ್ ಘಟನೆ ನಡೆದ ಸ್ಥಳದಲ್ಲಿ ಯಾರಿಗೂ ಅನಾಹುತ ಸಂಭವಿಸಿಲ್ಲ, ಗುತ್ತಿಗೆದಾರರು ಕೂಡಲೇ ರಸ್ತೆಯನ್ನು ಬಿಗಿಗೊಳಿಸಿ ಸಿಸಿ ರಸ್ತೆಯನ್ನು ನಿರ್ಮಿಸಬೇಕು ಮತ್ತು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಸಿಸಿ ರಸ್ತೆಯನ್ನು ಹೊಡೆದು ಕಾಮಗಾರಿಯನ್ನೇನೋ ಮುಗಿಸಿದ್ದಾರೆ, ಒಂದು ವರ್ಷ ಕಳೆದರೂ ರಸ್ತೆ ಮಾಡಲು ಮುಂದಾಗಿಲ್ಲ ಮಳೆ ಬಂದ ಸಂದರ್ಭದಲ್ಲಿ ಕೆಸರಿನ ರಸ್ತೆ ಆಗಿರುತ್ತದೆ. ನಾಲ್ಕೈದು ಗ್ರಾಮಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ಸಂಪರ್ಕ ಇರುವ ಈ ರಸ್ತೆ ಹೀಗೆ ಇದ್ದರೆ ಹೇಗೆ ಗುತ್ತಿಗೆದಾರರು ಕೂಡಲೇ ರಸ್ತೆ ನಿರ್ಮಿಸಬೇಕು ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಗುತ್ತಿಗೆ ದಾರರೇ ಹೊಣೆಗಾರರಾಗಬೇಕಾಗುತ್ತದೆ ಮತ್ತು ನಡೆಯುತ್ತಿರುವ ಕಾಮಗಾರಿಯನ್ನು ತಡೆದು ಪ್ರತಿಭಟಿಸಲಾಗುವುದು.

ವರದಿಗಾರರು

ಮಂಜುನಾಥ. ಲಕ್ಕಿಮರ(ವಿಜಯನಗರ)

Disclaimer: This Story is auto-aggregated by a Syndicated Feed and has not been Created or Edited By City Big News Staff.