ಚಿತ್ರದುರ್ಗ: ಪ್ರತಿ ವರ್ಷ ಮುರುಘಾ ಮಠದಿಂದ ಬಸವ ಜಯಂತಿಯಂದು ನೀಡಲಾಗುವಂತ ಬಸವಶ್ರೀ ಪ್ರಶಸ್ತಿಯನ್ನು ಈ ಬಾರಿ ಮರಣೋತ್ತರವಾಗಿ ನಟ ಡಾ.ಪುನೀತ್ ರಾಜ್ ಕುಮಾರ್ ಗೆ ಅವರಿಗೆ ನೀಡಲಾಗಿದೆ.
ಈ ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿಗೆ ಮುರುಘಾ ಶರಣರು ನೀಡಿ, ಗೌರವಿಸಿದರು. ಮುರುಘಾ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ, 2021ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಅಶ್ವಿನಿ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 5 ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.