Please assign a menu to the primary menu location under menu

State

80 ಸಾವಿರ ಫ‌ಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್‌

80 ಸಾವಿರ ಫ‌ಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್‌

ಬೆಂಗಳೂರು: ಆಕಸ್ಮಿಕವಾಗಿ ಮೃತಪಟ್ಟ ಕುರಿ ಹಾಗೂ ಮೇಕೆಗಳಿಗೆ ರಾಜ್ಯ ಸರ್ಕಾರದಿಂದ ಅನುಗ್ರಹ ಯೋಜನೆ ಅಡಿಯಲ್ಲಿ ಪರಿಹಾರ ಪಡೆಯಲು 80 ಸಾವಿರ ಫ‌ಲಾನುಭವಿಗಳು ಅರ್ಹತೆ ಪಡೆದಿದ್ದಾರೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ್‌ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ 30 ಜಿಲ್ಲೆಗಳಲ್ಲಿ ಇಲ್ಲಿಯವರೆಗೆ 39.18 ಕೋಟಿ ರೂ. ಮಂಜೂರಾಗಿದ್ದು 80 ಸಾವಿರ ಫ‌ಲಾನುಭವಿಗಳು ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಕರ್ನಾಟಕದಲ್ಲಿ 1.72 ಲಕ್ಷ ಕುರಿ ಮತ್ತು ಮೇಕೆಗಳಿವೆ. ಆಕಸ್ಮಿಕವಾಗಿ ಮೃತಪಟ್ಟ ಕುರಿ, ಮೇಕೆಗಳಿಗೆ 5000 ರೂ. ಹಾಗೂ ಕುರಿ ಮರಿಗಳಿಗೆ ರೂ.2500 ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ :
ಆಕಸ್ಮಿಕವಾಗಿ ಕುರಿ, ಮೇಕೆ ಅಥವಾ ಕುರಿ ಮರಿ ಮೃತಪಟ್ಟರೆ ಅದನ್ನು ಪಶುಸಂಗೋಪನೆ ಇಲಾಖೆಯ ಪಶುವೈದ್ಯರು ಮರಣೋತ್ತರ ಪರಿಕ್ಷೆ ಮಾಡಿ ಮುಂದಿನ ಪ್ರಕ್ರಿಯೆ ಆರಂಭವಿಸುತ್ತಾರೆ. ಪರಿಹಾರ ಪಡೆಯುವ ಫ‌ಲಾನುಭವಿಗಳು ಅಗತ್ಯ ದಾಖಲೆಗಳಾದಆಧಾರ ಕಾರ್ಡ್‌ ಮತ್ತು ಬ್ಯಾಂಕ್‌ ಪಾಸ್‌ಬುಕ್‌ ಒದಗಿಸಬೇಕು. ಆಧಾರ ಕಾರ್ಡ್‌ನೊಂದಿಗೆ ಫ‌ಲಾನುಭವಿಯ ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿದ್ದರೆ. ಹಣ ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅನುಗ್ರಹ ಯೋಜನೆಗೆ 2021-22ನೇ ಸಾಲಿನಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸಮಸ್ಯೆ ಇದ್ದರೆ ಹತ್ತಿರದ ಪಶುಸಂಗೋಪನೆ ಇಲಾಖೆ ಅಥವಾ ಪಶುಕಲ್ಯಾಣ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲು ಸಚಿವರು ಕೊರಿದ್ದಾರೆ.


Leave a Reply

error: Content is protected !!