Please assign a menu to the primary menu location under menu

international

ಹೆಂಡತಿ ಕಾಟಕ್ಕಿಂತ ಜೈಲು ವಾಸವೇ ಲೇಸು ಎಂದ ಭೂಪ…!

ಹೆಂಡತಿ ಕಾಟಕ್ಕಿಂತ ಜೈಲು ವಾಸವೇ ಲೇಸು ಎಂದ ಭೂಪ…!

ಕೆಲವರು ಜೈಲು ವಾಸವನ್ನು ಸ್ವಾತಂತ್ರ್ಯವೆಂದು ಭಾವಿಸುತ್ತಾರೆ. ಇಟಲಿಯಲ್ಲಿ ಗೃಹಬಂಧನದಲ್ಲಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ಎಷ್ಟು ಬೇಸತ್ತಿದ್ದಾನೆಂದ್ರೆ ಆತ,ಪತ್ನಿ ಮನೆಯಿಂದ ಓಡಿ ಹೋಗಲು ಬಯಸಿದ್ದಾನೆ. ಹೆಂಡತಿ ಕಾಟದಿಂದ ತಪ್ಪಿಸಿಕೊಳ್ಳಬೇಕಾಗಿದೆ. ಹಾಗಾಗಿ Read more…

ಕೆಲವರು ಜೈಲು ವಾಸವನ್ನು ಸ್ವಾತಂತ್ರ್ಯವೆಂದು ಭಾವಿಸುತ್ತಾರೆ. ಇಟಲಿಯಲ್ಲಿ ಗೃಹಬಂಧನದಲ್ಲಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ಎಷ್ಟು ಬೇಸತ್ತಿದ್ದಾನೆಂದ್ರೆ ಆತ,ಪತ್ನಿ ಮನೆಯಿಂದ ಓಡಿ ಹೋಗಲು ಬಯಸಿದ್ದಾನೆ. ಹೆಂಡತಿ ಕಾಟದಿಂದ ತಪ್ಪಿಸಿಕೊಳ್ಳಬೇಕಾಗಿದೆ. ಹಾಗಾಗಿ ನನ್ನನ್ನು ಜೈಲಿಗೆ ಹಾಕಿ ಎಂದು ಪೊಲೀಸರಿಗೆ ಆತ ವಿನಂತಿಸಿಕೊಂಡಿದ್ದಾನೆ.

ಗೈಡೋನಿಯಾ ಮಾಂಟೆಸೆಲಿಯೊದಲ್ಲಿ ವಾಸಿಸುವ 30 ವರ್ಷದ ಅಲ್ಬೇನಿಯನ್ ವ್ಯಕ್ತಿ, ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ಜೀವನ ಅಸಹನೀಯವಾಗಿದೆ ಎಂದಿದ್ದಾನೆ. ಇನ್ನು ಮುಂದೆ ತನ್ನ ಹೆಂಡತಿಯೊಂದಿಗೆ ಬಲವಂತದ ವಾಸ ಸಾಧ್ಯವಿಲ್ಲವೆಂದು  ಟಿವೊಲಿಯ ಕ್ಯಾರಾಬಿನಿಯೇರಿ ಪೊಲೀಸರ ಮುಂದೆ ಹೇಳಿದ್ದಾರೆ.

ಪರಿಸ್ಥಿತಿಯಿಂದ ವಿಚಲಿತನಾದ ಆತ ಮನೆಯಿಂದ ಓಡಿ ಹೋಗಲು ಮುಂದಾಗಿದ್ದಾನೆ. ಮಾದಕವಸ್ತು ಅಪರಾಧಕ್ಕಾಗಿ ಆತ ಗೃಹಬಂಧನದಲ್ಲಿದ್ದ. ಹೆಂಡತಿ ಮತ್ತು ಕುಟುಂಬದೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆದ್ರೆ ಈಗ ಇದು ಸಾಧ್ಯವಾಗ್ತಿಲ್ಲ. ನನ್ನ ಜೀವನ ನರಕವಾಗಿದೆ. ಇನ್ಮುಂದೆ ಗೃಹ ಬಂಧನದಲ್ಲಿ ಇರಲಾರೆ. ನನ್ನನ್ನು ಜೈಲಿಗೆ ಕಳುಹಿಸಿ ಎಂದಿದ್ದಾನೆ.

ಗೃಹಬಂಧನವನ್ನು ಉಲ್ಲಂಘಿಸಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ನ್ಯಾಯಾಂಗ ಅಧಿಕಾರಿಗಳು ಆತನನ್ನು ಜೈಲಿಗೆ ಕಳುಹಿಸಿದ್ದಾರೆ.


Leave a Reply

error: Content is protected !!