Please assign a menu to the primary menu location under menu

State

ದೇಶದ ಇತಿಹಾಸದಲ್ಲೇ ಗಾಂಧೀಜಿ ಬಿಟ್ರೆ 25 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್

ದೇಶದ ಇತಿಹಾಸದಲ್ಲೇ ಗಾಂಧೀಜಿ ಬಿಟ್ರೆ 25 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ನಾಡಿಗೆ ನಾಡೇ ಕಂಬನಿ ಮಿಡಿದಿದೆ. ಲಕ್ಷಾಂತರ ಮಂದಿ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಅಪಾರ ಸಂಖ್ಯೆಯ ಗಣ್ಯರು, ಲಕ್ಷಾಂತರ ಅಭಿಮಾನಿಗಳು 45 ಗಂಟೆಗೂ ಅಧಿಕ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಸಾಗರೋಪಾದಿಯಲ್ಲಿ ಹರಿದುಬಂದು ಅಂತಿಮ ದರ್ಶನ ಪಡೆದು ಕೊಂಡಿದ್ದಾರೆ. 25 ಲಕ್ಷಕ್ಕೂ ಅಧಿಕ ಮಂದಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ರಾಜಕುಮಾರ್ ಕುಟುಂಬದವರು, ಅಭಿಮಾನಿಗಳು ಯಾವುದೇ ಅವ್ಯವಸ್ಥೆ ಆಗದಂತೆ ಎಚ್ಚರಿಕೆ ವಹಿಸಿದ್ದು, ಶುಕ್ರವಾರ ಸಂಜೆಯಿಂದ ಭಾನುವಾರ ಬೆಳಗಿನ ಜಾವದವರೆಗೆ ನಿರಂತರವಾಗಿ ಅಭಿಮಾನಿಗಳು ದರ್ಶನ ಪಡೆದುಕೊಂಡಿದ್ದಾರೆ. ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿ ಹೊರತುಪಡಿಸಿ 25 ಲಕ್ಷಕ್ಕೂ ಅಧಿಕ ಮಂದಿ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್ ರಾಜಕುಮಾರ್ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.


Leave a Reply

error: Content is protected !!