Please assign a menu to the primary menu location under menu

National

ಗಂಗಾ ಉಪನದಿಗಳಲ್ಲಿ ನಿಯಮಿತ ನೀರು

ಗಂಗಾ ಉಪನದಿಗಳಲ್ಲಿ ನಿಯಮಿತ ನೀರು

ನವದೆಹಲಿ: ಯಮುನಾ ನದಿ ಸೇರಿದಂತೆ ಗಂಗಾನದಿಯ ಉಪನದಿಗಳಲ್ಲಿ ನೀರು ನಿಯಮಿತವಾಗಿ ಹರಿಯುವಂತೆ ಮಾಡಲು “ನ್ಯಾಷನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ’ (ಎನ್‌ಎಂಸಿಜಿ) ಸಂಸ್ಥೆ ಚಿಂತನೆ ನಡೆಸಿದೆ.

ಉಪನದಿಗಳಲ್ಲಿ ಕನಿಷ್ಠ ಮಟ್ಟದಲ್ಲಿ ನಿತ್ಯವೂ ನೀರು ಹರಿಯುವಂತಿದ್ದರೆ, ಗಂಗಾ ನದಿಯಲ್ಲೂ ಸರ್ವಕಾಲದಲ್ಲಿ ನೀರು ಲಭ್ಯವಾಗುತ್ತದೆ. ಈ ನೀರನ್ನೇ ನಂಬಿಕೊಂಡಿರುವ ನದಿ ಮುಖಜ ಭೂಮಿಯ ಜನರಿಗೆ ಅನುಕೂಲವಾಗುತ್ತದೆ.ಇದರಿಂದ ಗಂಗೆಯು ಪರಿಶುದ್ಧವಾಗಿರಲೂ ಸಹಾಯವಾಗುತ್ತದೆ ಎಂಬುದು ಎನ್‌ಎಂಸಿಜಿ ಲೆಕ್ಕಾಚಾರ.

“2018ರಲ್ಲೂ ಇಂಥದ್ದೇ ಯೋಜನೆಯೊಂದನ್ನು ಎನ್‌ಎಂಸಿಜಿ ಹೊಂದಿತ್ತು. ಆಗೊಂದು ಇ-ಫ್ಲೋ ಎಂಬ ಅಧಿಸೂಚನೆಯನ್ನು ಹೊರಡಿಸಿದ್ದ ಸಂಸ್ಥೆ, ಗಂಗಾನದಿಯಲ್ಲಿ ಸದಾಕಾಲ ನೀರು ಇರುವಂತೆ ನೋಡಿಕೊಳ್ಳಲು ಸೂಚಿಸಿತ್ತು. ಅಲ್ಲದೆ, ನದಿಯಲ್ಲಿ ಉತ್ತಮ ಗುಣಮಟ್ಟದ ನೀರು ಹರಿಯುವಂತೆ, ನದಿಯ ಎಲ್ಲಾ ಘಟಕಗಳು, ನದಿಯ ನೀರಿನ ಸ್ಥಿತಿಸ್ಥಾಪಕತ್ವವನ್ನು ಕಾಪಾಡಬೇಕು ಎಂದು ಅದರಲ್ಲಿ ಸೂಚಿಸಿತ್ತು. ಈಗ, ಉಪನದಿಗಳಲ್ಲಿ ನೀರು ನಿರಂತರವಾಗಿ ಹರಿಯುವಂತೆ ಮಾಡಲು ಸಂಸ್ಥೆ ಯೋಜಿಸಿದೆ” ಎಂದು ಸಂಸ್ಥೆಯ ಮಹಾ ನಿರ್ದೇಶಕ ರಾಜೀವ್‌ ರಂಜನ್‌ ತಿಳಿಸಿದ್ದಾರೆ.

ಸದ್ಯದಲ್ಲೇ ಇನ್ನೆರಡು ಯೋಜನೆ
ಸಂಸ್ಥೆಯಿಂದ ಮುಂದೆ ಜಾರಿಗೊಳ್ಳಲಿರುವ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಸದ್ಯದಲ್ಲೇ ಗಂಗಾ ನದಿಯಲ್ಲಿ ಏರ್ಪಡಬಹುದಾದ ಪ್ರವಾಹದಿಂದ ಹಾನಿಗೀಡಾಗುವ ಪ್ರದೇಶಗಳನ್ನು ಗುರುತು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ, ನದಿ ಮುಖಜ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅಂತರ್ಗತ ನದಿಪಾತ್ರದ ಭೂಮಿಯ ನಿರ್ವಹಣಾ ಯೋಜನೆ ಸಿದ್ಧಪಡಿಸಲಾಗುತ್ತದೆ. ಈ ಯೋಜನೆಗಳಿಂದಲೂ ನಾವು ಗಂಗಾ ನದಿಯನ್ನು ಮತ್ತಷ್ಟು ಶುದ್ಧೀಕರಿಸಿ, ನದಿಯಲ್ಲಿ ನಿರಂತರವಾಗಿ ನೀರು ಹರಿಯುವಂತೆ ಮಾಡಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.


Leave a Reply

error: Content is protected !!