Please assign a menu to the primary menu location under menu

Entertainment

‘ಪುಷ್ಪ’ ಸಿನಿಮಾದ ಮೂರನೇ ಹಾಡು ರಿಲೀಸ್

‘ಪುಷ್ಪ’ ಸಿನಿಮಾದ ಮೂರನೇ ಹಾಡು ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಪ್ರೇಕ್ಷಕರಲ್ಲಿ ಒಂದರ ಮೇಲೊಂದು ಸಿಹಿಸುದ್ದಿ ನೀಡುತ್ತಲೇ ಇದೆ.ಇದೀಗ ‘ಪುಷ್ಪ’ ಸಿನಿಮಾದ ‘ಸಾಮಿ ಸಾಮಿ’ ಎಂಬ ಮೂರನೇ ಹಾಡೊಂದನ್ನು ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಕೇಳುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಪ್ರಕಾಶ್ ರಾಜ್ ಅನಸೂಯ ಭಾರದ್ವಾಜ್ ಡಾಲಿ ಧನಂಜಯ್ ಸೇರಿದಂತೆ ಮೊದಲಾದವರು ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಡಿಸೆಂಬರ್ 17ರಂದು ತೆಲುಗು ಕನ್ನಡ ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ


Leave a Reply

error: Content is protected !!