Please assign a menu to the primary menu location under menu

Entertainment

ಪುನೀತ್ ಪಾರ್ಥಿವ ಶರೀರದ ಮೆರವಣಿಗೆ ರೂಟ್ ಮ್ಯಾಪ್ ಸಿದ್ಧ

ಪುನೀತ್ ಪಾರ್ಥಿವ ಶರೀರದ ಮೆರವಣಿಗೆ ರೂಟ್ ಮ್ಯಾಪ್ ಸಿದ್ಧ

ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (46) ಅವರ ಪಾರ್ಥೀವ ಶರೀರದ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿ ಪುನೀತ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸಾಗರೋಪಾದಿಯಲ್ಲಿ ಜನರು ಬಂದು ತಮ್ಮ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ಪಾರ್ಥೀವ ಶರೀರದ ಮೆರವಣಿಗೆಗೆ ರೂಟ್ ಮ್ಯಾಪ್ ಸಿದ್ಧವಾಗಿದ್ದು, ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ.

ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸನ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಯಶವಂತಪುರ, ಗೋವರ್ಧನ್, ಗೊರಗುಂಟೆ ಪಾಳ್ಯ ಸಿಗ್ನಲ್ ಮೂಲಕವಾಗಿ ಮೆರವಣಿಗೆ ಸಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮಧ್ಯಾಹ್ನ 3 ಗಂಟೆಗೆ ಕಂಠೀರವ ಸ್ಟೇಡಿಯಂ ನಿಂದ ಪುನೀತ್ ಪಾರ್ಥೀವ ಶರೀರದ ಮೆರವಣಿ ಆರಂಭವಾಗಲಿದೆ. ಸಂಜೆ 5:30ರ ವೇಳೆಗೆ ಕಂಠೀರವ ಸ್ಟೇಡಿಯಂ ಗೆ ಪಾರ್ಥೀವ ಶರೀರ ಕೊಂಡೊಯ್ಯಲಾಗುವುದು. ಪುನೀತ್ ಹಿರಿಯ ಮಗಳು ಅಮೇರಿಕಾದಿಂದ ಆಗಮಿಸುತ್ತಿದ್ದು, ಮಧ್ಯಾಹ್ನ 4ರಿಂದ 5 ಗಂಟೆ ವೇಳೆಗೆ ಬಂದು ತಲುಪುವ ಸಾಧ್ಯತೆ ಇದೆ. ಮಗಳು ಬಂದ ಬಳಿಕ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದರು.


Leave a Reply

error: Content is protected !!