Local News

ರಾಜ್ಯದಲ್ಲಿ ಸಾಲು-ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ!

ರಾಜ್ಯದಲ್ಲಿ ಸಾಲು-ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದ್ದು, ರಾಜ್ಯ ರಾಜಕೀಯದಲ್ಲಿ  ಆಪರೇಷನ್ ಹಸ್ತಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬರುತ್ತದೆ.

ಆಪರೇಷನ್​​​ ಹಸ್ತದ ಜೊತೆ ಆಪರೇಷನ್ ಬಿಬಿಎಂಪಿ ಶುರು ಮಾಡಿಕೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್​ನ ಅಸ್ತ್ರದಿಂದ ತಮ್ಮ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೂ ಸಹ ಇಂದು ಹಲವು ಮಾಜಿ ಕಾರ್ಪೊರೇಟರ್​ಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. KR ಪುರ ಕ್ಷೇತ್ರದ ಮಾಜಿ ಕಾರ್ಪೊರೇಟರ್‌ಗಳಾದ ವೀರಣ್ಣ, ಶ್ರೀನಿವಾಸ ಅವರು ಇಂದು ಕುಮಾರಕೃಪಾ ಗೆಸ್ಟ್​​​ಹೌಸ್​​​ನಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಆರ್.ಆರ್ ನಗರದ ಕ್ಷೇತ್ರದ ಬಿಜೆಪಿ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್​ ಸೇರ್ಪಡೆಯಾದ ಬಳಿಕ ಇದೀಗ ಕೆ.ಆರ್ ಪುರ ಕ್ಷೇತ್ರದ ಮಾಜಿ ಕಾರ್ಪೋರೇಟ್​ಗಳು ಕೈ ಹಿಡಿದರು.

ವಿಜಿನಾಪುರ ವಾರ್ಡ್ ಮಾಜಿ ಕಾರ್ಪೋರೇಟರ್​ ರಾಜಣ್ಣ, ಕೆ.ಆರ್ ಪುರ ವಾರ್ಡ್ ಮಾಜಿ ಕಾರ್ಪೋರೇಟರ್​ ವೀರಣ್ಣ ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದು, ಈ ವೇಳೆ ಸಚಿವ ಬೈರತಿ ಸುರೇಶ್ ಕೂಡ ಉಪಸ್ಥಿತರಿದ್ದರು. ಕೆಲ ದಿನಗಳಿಂದ ಅಷ್ಟೇ ಆರ್​ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಕೆಆರ್ ಪುರಂ ಕ್ಷೇತ್ರದಲ್ಲೂ ಸದ್ದಿಲ್ಲದೇ ಬಿಜೆಪಿ ಶಾಸಕರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿಗೆ ಆತಂಕ ಶುರುವಾಗಿದೆ.

 

Disclaimer: This Story is auto-aggregated by a Syndicated Feed and has not been Created or Edited By City Big News Staff.