Please assign a menu to the primary menu location under menu

international

OMG: ಪ್ರಯೋಗಾಲಯದಲ್ಲಿ ಕಾಫಿ ಪುಡಿ ಉತ್ಪಾದಿಸಿದ ವಿಜ್ಞಾನಿಗಳು..!

OMG: ಪ್ರಯೋಗಾಲಯದಲ್ಲಿ ಕಾಫಿ ಪುಡಿ ಉತ್ಪಾದಿಸಿದ ವಿಜ್ಞಾನಿಗಳು..!

ಕಾಫಿ ಹೇಗೆ ತಯಾರಾಗುತ್ತೆ ಅಂತಾ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಇದಕ್ಕೆ ಉತ್ತರ ಕೊಟ್ಟುಬಿಡ್ತಾರೆ. ಆದರೆ ಫಿನ್​ಲ್ಯಾಂಡ್​​ನ ವಿಜ್ಞಾನಿಗಳು ಈ ಪ್ರಶ್ನೆಗೆ ನೀಡುವ ಉತ್ತರವು ನಿಮಗೆ ಸೋಜಿಗ ಎನಿಸಬಹುದು. Read more…

ಕಾಫಿ ಹೇಗೆ ತಯಾರಾಗುತ್ತೆ ಅಂತಾ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಇದಕ್ಕೆ ಉತ್ತರ ಕೊಟ್ಟುಬಿಡ್ತಾರೆ. ಆದರೆ ಫಿನ್​ಲ್ಯಾಂಡ್​​ನ ವಿಜ್ಞಾನಿಗಳು ಈ ಪ್ರಶ್ನೆಗೆ ನೀಡುವ ಉತ್ತರವು ನಿಮಗೆ ಸೋಜಿಗ ಎನಿಸಬಹುದು. ಏಕೆಂದರೆ ಫಿನ್​ಲ್ಯಾಂಡ್​ ವಿಜ್ಞಾನಿಗಳು ಪ್ರಯೋಗಾಲಯದಲ್ಲೇ ಕಾಫಿಯನ್ನು ಉತ್ಪಾದಿಸುವ ಮಾರ್ಗವೊಂದನ್ನು ಕಂಡು ಹಿಡಿದಿದ್ದಾರೆ.

ಪ್ರಪಂಚದಾದ್ಯಂತ ಕಾಫಿಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಉಂಟಾಗುವ ಅರಣ್ಯ ನಾಶವನ್ನು ತಪ್ಪಿಸುವ ಸಲುವಾಗಿ ಫಿನ್​ಲ್ಯಾಂಡ್​ನ ವಿಜ್ಞಾನಿಗಳು ಪ್ರಯೋಗಾಲಯದಲ್ಲೇ ಕಾಫಿಯನ್ನು ಉತ್ಪಾದಿಸಿ ಅದರಲ್ಲಿ ಯಶಸ್ಸನ್ನು ಪಡೆದಿದ್ದಾರೆ.

ಕಾಫಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಕಾಫಿ ಬೀಜಗಳ ಉತ್ಪಾದನೆಗೆ ಬೇಕಾದ ಭೂಮಿಯನ್ನು ಹೊಂದುವ ಸಲುವಾಗಿ ಅನೇಕರು ಅರಣ್ಯನಾಶಕ್ಕೆ ಮುಂದಾಗಿದ್ದಾರೆ. ಅತಿಯಾಗಿ ಮಳೆಯಾಗುವ ಪ್ರದೇಶಗಳಲ್ಲೇ ಅರಣ್ಯ ನಾಶವಾಗುತ್ತಿರೋದು ಪರಿಸರಕ್ಕೆ ತುಂಬಾನೇ ದೊಡ್ಡ ನಷ್ಟವಾಗಿದೆ. ಹೀಗಾಗಿ ವಿಜ್ಞಾನಿಗಳು ಸಾಂಪ್ರದಾಯಿಕವಾಗಿ ಕಾಫಿಯನ್ನು ಬೆಳೆಯುವ ಬದಲು ಕಾಫಿ ಸಸ್ಯದಿಂದ ತೆಗೆದ ಕೋಶಗಳ ಸಹಾಯದಿಂದ ಪ್ರಯೋಗಾಲಯದಲ್ಲಿ ಕಾಫಿಯನ್ನು ಉತ್ಪಾದಿಸಿದ್ದಾರೆ. ಇದೊಂದು ಸೆಲ್ಯೂಲಾರ್​ ಕೃಷಿ ವಿಧಾನವಾಗಿದ್ದು, ಇಲ್ಲಿ ಸಸ್ಯದಿಂದ ಕೋಶಗಳನ್ನು ತೆಗೆದುಕೊಳ್ಳಲಾಗುತ್ತೆ.

ಪ್ರಯೋಗಾಲಯದಲ್ಲಿ ನಿರ್ಮಿತವಾದ ಕಾಫಿಯು ಥೇಟ್​ ನೈಸರ್ಗಿಕ ಕಾಫಿಯ ವಾಸನೆಯನ್ನೇ ಹೊಂದಿದೆ. ರುಚಿ ಹಾಗೂ ವಾಸನೆ ವಿಚಾರದಲ್ಲಿ ನಿಮಗೆ ಸಾಮಾನ್ಯ ಕಾಫಿ ಹಾಗೂ ಪ್ರಯೋಗಾಲಯದಲ್ಲಿ ನಿರ್ಮಾಣವಾದ ಕಾಫಿಯ ಬಗ್ಗೆ ವ್ಯತ್ಯಾಸ ಹುಡುಕಲು ಸಾಧ್ಯವೇ ಇಲ್ಲ. ನನಗಂತೂ ಮೊದಲ ಬಾರಿಗೆ ಪ್ರಯೋಗಾಲಯದಿಂದ ನಿರ್ಮಾಣವಾದ ಕಾಫಿ ಪುಡಿಯಿಂದ ಮಾಡಲಾದ ಕಾಫಿ ಸವಿಯುವಾಗ ರೋಮಾಂಚನವಾಗಿತ್ತು ಎಂದು ಫಿನ್​ಲ್ಯಾಂಡ್​ನ ಸಂಶೋಧನಾ ಸಂಸ್ಥೆಯ ಜೈವಿಕ ತಂತ್ರಜ್ಞಾನದ ಮುಖ್ಯಸ್ಥ ಡಾ. ಹೈಕೋ ರಿಷರ್​ ಹೇಳಿದ್ದಾರೆ.

ಇನ್ನೊಂದು ಆಶ್ಚರ್ಯಕರ ವಿಚಾರ ಅಂದರೆ ಈ ರೀತಿ ಕಾಫಿಯ ಕೋಶಗಳನ್ನು ಬಳಸಿ ಕಾಫಿ ತಯಾರಿಸುವ ವಿಧಾನವು 1974ರಷ್ಟು ಹಿಂದಿನದ್ದಾಗಿದೆ. ಇದನ್ನು ಮೊದಲು ವಿಜ್ಞಾನಿ ಪಿ.ಎಂ. ಟೌನ್ಸೆ ಪರಿಚಯ ಮಾಡಿಕೊಟ್ಟರು. ಇದೇ ವಿಧಾನವನ್ನು ಬಳಸಿ ಈಗ ಕಾಫಿ ತಯಾರಿಸಲಾಗ್ತಿದ್ದು, ಈ ಲ್ಯಾಬ್​ ನಿರ್ಮಿತ ಕಾಫಿ ಪುಡಿಯು 2025ರ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ಅಂದಾಜಿಸಲಾಗಿದೆ.


Leave a Reply

error: Content is protected !!