Please assign a menu to the primary menu location under menu

National

ಬಂಡಿಪೋರಾದಲ್ಲಿ ಬಾಂಬ್ ಸ್ಪೋಟ: ಆರು ಮಂದಿಗೆ ಗಾಯ

ಬಂಡಿಪೋರಾದಲ್ಲಿ ಬಾಂಬ್ ಸ್ಪೋಟ: ಆರು ಮಂದಿಗೆ ಗಾಯ

ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಆರು ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಬಂಡಿಪೋರಾದ ಸಂಬಾಲ್ ನ ಸುಮೋ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಆರು ಜನರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ.
ಸೇನೆಯ ಬೆಂಗಾವಲು ಪಡೆಯನ್ನು ಗುರಿಯನ್ನಾಗಿಸಿ ದಾಳಿ ಮಾಡಲಾಗಿದೆ ಎನ್ನಲಾಗಿದೆ. “ಬೆಂಗಾವಲು ಪಡೆ ಚಲಿಸುವ ಮೊದಲು, ಸ್ಫೋಟ ಸಂಭವಿಸಿದೆ. ಮಹಿಳೆಯರು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ. ಇಬ್ಬರನ್ನು ಎಸ್‌ಎಂಹೆಚ್‌ಎಸ್ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ನಾಲ್ವರಿಗೆ ಸಂಬಲ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು
ಗಾಯಗೊಂಡವರನ್ನು ಮೊಹಮ್ಮದ್ ಅಲ್ತಾಫ್, ಫೈಸಲ್ ಫಯಾಜ್, ಮುಷ್ತಾಕ್ ಅಹ್, ತಸ್ಲೀಮಾ ಬಾನೋ, ಅಬ್ ಹಮೀದ್ ಮತ್ತು ಫಯಾಜ್ ಅಹ್ ಎಂದು ಗುರುತಿಸಲಾಗಿದೆ.


Leave a Reply

error: Content is protected !!