Please assign a menu to the primary menu location under menu

Sports

ಟಿ ಟ್ವೆಂಟಿ ವಿಶ್ವಕಪ್ 2021: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ

ಟಿ ಟ್ವೆಂಟಿ ವಿಶ್ವಕಪ್ 2021: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ

ನಿನ್ನೆಯಿಂದ ಟಿ ಟ್ವೆಂಟಿ ವರ್ಲ್ಡ್ ಕಪ್ ಸೂಪರ್‌ 12 ಆರಂಭವಾಗಿದ್ದು, ಇಂದು ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ Read more…

ನಿನ್ನೆಯಿಂದ ಟಿ ಟ್ವೆಂಟಿ ವರ್ಲ್ಡ್ ಕಪ್ ಸೂಪರ್‌ 12 ಆರಂಭವಾಗಿದ್ದು, ಇಂದು ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡ ಮುಖಾಮುಖಿಯಾಗಿವೆ.

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಈ ಎರಡೂ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿ ಅವಕಾಶ ಗಿಟ್ಟಿಸಿಕೊಂಡಿವೆ.

ದಸುನ್ ಶನಕ ಶ್ರೀಲಂಕಾ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದು, ಆಲ್ ರೌಂಡರ್ ಮಹಮದುಲ್ಲ ಬಾಂಗ್ಲಾದೇಶ ತಂಡದ ನಾಯಕರಾಗಿದ್ದಾರೆ. ಇದುವರೆಗೂ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ 11 ಬಾರಿ ಸೆಣಸಾಡಿದ್ದು ಬಾಂಗ್ಲಾದೇಶ ತಂಡ 4ಬಾರಿ ಗೆಲುವು ಕಂಡಿದ್ದು ಶ್ರೀಲಂಕಾ ತಂಡ 7ಬಾರಿ ಜಯ ಸಾಧಿಸಿದೆ. ಶಾರ್ಜಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.


Leave a Reply

error: Content is protected !!