ದೇಹತೂಕದಲ್ಲಿ ಭಾರೀ ಏರಿಕೆ ಕಂಡು ಬಂದ ಕಾರಣ ಥೈವಾನ್ ತಾಯ್ಪೇ ಮೃಗಾಲಯದಲ್ಲಿರುವ ಎರಡು ಪಾಂಡಾಗಳನ್ನು ಕಠಿಣ ಪಥ್ಯಕ್ರಮಕ್ಕೆ ಒಳಪಡಿಸಲಾಗಿದೆ.
ಸ್ಥೂಲಕಾಯಿಗಳಾಗಿಬಿಟ್ಟ ಎರಡು ಹೆಣ್ಣು ಪಾಂಡಾಗಳಾದ ಯುವಾನ್ ಜ಼ಾಯ್ ಮತ್ತು ಯುವಾನ್ ಬಾವೋರನ್ನು ಹೀಗೆ ನೋಡಿಕೊಳ್ಳಲಾಗುತ್ತಿದೆ. ಈ ಪಾಂಡಾಗಳ ಹೆತ್ತವರನ್ನು ಚೀನಾ 2008ರಲ್ಲಿ ತಾಯ್ವಾನ್ಗೆ ಉಡುಗೊರೆಯಾಗಿ ಕೊಟ್ಟಿತ್ತು.
ಒಂಬತ್ತು ವರ್ಷದ ಯುವಾನ್ ಜ಼ಾಯ್ ತನ್ನ ಅಪ್ಪನಷ್ಟೇ ತೂಕವಿದ್ದು 115 ಕೆಜಿ ತೂಗುತ್ತಿದೆ. ಇದರ ಸಹೋದರಿ ಯುವಾನ್ ಬಾವೋ ಬರೀ ಒಂದು ವರ್ಷ ವಯಸ್ಸಿಗೆಲ್ಲಾ 70 ಕೆಜಿ ತೂಕವಿದೆ.
ಹೆಣ್ಣು ಪಾಂಡಾಗೆ ಆರೋಗ್ಯಕರ ತೂಕವು 105-110 ಕೆಜಿಯಷ್ಟಿರುತ್ತದೆ. ಸ್ಥೂಲಕಾಯಿ ಪಾಂಡಾಗಳಲ್ಲಿ ಹೈಪರ್ಟೆನ್ಷನ್ ಮತ್ತು ಹೈಪರ್ಗ್ಲೇಸೇಮಿಯಾದಂಥ ಕಾಯಿಲೆಗಳು ಕಂಡು ಬರುತ್ತವೆ. ಇದರಿಂದ ಆರೋಗ್ಯ ಸಂಬಂಧಿ ಗಂಭೀರ ಸಮಸ್ಯೆಗಳು ಕಾಣುತ್ತವೆ.
ಆದರೆ ಸದ್ಯಕ್ಕೆ ಈ ಎರಡೂ ಪಾಂಡಾಗಳು ಆರೋಗ್ಯವಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದೇ ಇರಲಿ ಎಂದು ಮುನ್ನೆಚ್ಚರಿಕೆ ದೃಷ್ಟಿಯಿಂದ ಆರೋಗ್ಯಕರ ಪಥ್ಯಕ್ಕೆ ಎರಡೂ ಪಾಂಡಾಗಳನ್ನು ತರಲಾಗುತ್ತಿದೆ.