Please assign a menu to the primary menu location under menu

National

ನೀಟ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ನೀಟ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ಚೆನ್ನೈ: ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಯ ಭಯಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕೊಯಮತ್ತೂರ್‌ನ ಸಂಗರಾಯಪುರಂನ ಕೆ.ಕೀರ್ತಿವಾಸನ್‌(20) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಆತ ಈ ಹಿಂದೆ 2019 ಮತ್ತು 2020ರಲ್ಲಿ ನೀಟ್‌ ಪರೀಕ್ಷೆ ಬರೆದಿದ್ದರೂ ಪಾಸ್‌ ಆಗಿರಲಿಲ್ಲ. ಈ ವರ್ಷವೂ ನೀಟ್‌ ಪರೀಕ್ಷೆ ಬರೆದಿದ್ದ ಕೀರ್ತಿವಾಸನ್‌, ಪರೀಕ್ಷೆಯ ಕೀ ಉತ್ತರಗಳು ಬಂದ ನಂತರ ತೀರಾ ನೊಂದುಕೊಂಡಿದ್ದ.

ಈ ಬಾರಿಯೂ ಪಾಸ್‌ ಆಗುವುದಿಲ್ಲವೆಂದು ಪೋಷಕರೆದುರು ಹೇಳಿಕೊಂಡಿದ್ದನಂತೆ. ಅದೇ ನೋವಿನಲ್ಲಿ ಆತ ಶುಕ್ರವಾರ ಕೀಟನಾಶಕ ಸೇವಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾನೆ.


Leave a Reply

error: Content is protected !!