Please assign a menu to the primary menu location under menu

National

2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚು

2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚು

ನವದೆಹಲಿ: ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ 2020ರಲ್ಲಿ ಶೇ.10ರಷ್ಟು ಹೆಚ್ಚಾಗಿದೆ.

ಕೋವಿಡ್‌ ಸೋಂಕಿನಿಂದ ಉಂಟಾಗಿರುವ ವಿವಿಧ ರೀತಿಯ ಆಘಾತಗಳಿಂದಾಗಿ ಒಟ್ಟು 1.53 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಕೇಂದ್ರ (ಎನ್‌ಸಿಆರ್‌ಬಿ)ದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅಂಶ 1967ರ ಬಳಿಕದ ಗರಿಷ್ಠ ದಾಖಲೆಯಾಗಿದೆ.ಪೈಕಿ ಕರ್ನಾಟಕದಲ್ಲಿ 12, 259 ಮಂದಿ ಜೀವ ಕಳೆದುಕೊಂಡಿದ್ದಾರೆ ಎನ್ನುವುದು ಗಮನಾರ್ಹ.

ಮಹಾರಾಷ್ಟ್ರದಲ್ಲಿ 19,909, ತಮಿಳುನಾಡಿನಲ್ಲಿ 16 883, ಮಧ್ಯಪ್ರದೇಶದಲ್ಲಿ 14, 578, ಪಶ್ಚಿಮ ಬಂಗಾಳದಲ್ಲಿ 13, 103 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಐದು ರಾಜ್ಯಗಳಲ್ಲಿಯೇ ಶೇ.50.1 ಪ್ರಕರಣಗಳು ದೃಢಪಟ್ಟಿವೆ.

ಟಾಪ್‌ ಐದು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೊನೆಯ ಸ್ಥಾನದಲ್ಲಿದ್ದು, ಶೇಕಡಾವಾರು ಲೆಕ್ಕಾಚಾರದಲ್ಲಿ ಶೇ.8 ಆಗಿದೆ. ಜೀವ ಕಳೆದು ಕೊಂಡವರ ಪೈಕಿ ಶೇ. 22 ಜನ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (ಎನ್‌ಸಿಆರ್‌ಬಿ) ದಾಖಲೆಗಳಲ್ಲಿ ತಿಳಿಸಲಾಗಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವವರು ವೃತ್ತಿಪರರು. ಇವರ ಪ್ರಮಾಣ ಶೇ. 16.5ರಷ್ಟಿದೆ. ಆನಂತರದ ಸ್ಥಾನಗಳಲ್ಲಿ ದಿನಗೂಲಿ ನೌಕರರು (ಶೇ. 15.67), ನಿವೃತ್ತ ನೌಕರರು (ಶೇ. 11.9), ನಿರುದ್ಯೋಗಿಗಳು (ಶೇ. 11.65) ಇದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಶೇ.3.1ರಷ್ಟಾಗಿದೆ.

 


Leave a Reply

error: Content is protected !!