spot_img
30.5 C
Bengaluru
Tuesday, May 24, 2022
spot_img
spot_img
spot_img

ಬಡವರ ಮನೆಗೆ ಬೆಳಕು ನೀಡುವ ಬಜೆಟ್: ಸಚಿವ ಸುನೀಲ್ ಕುಮಾರ್

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದು, ಬಡವರ ಮನೆಗೆ “ಬೆಳಕು” ನೀಡುವ ಯೋಜನೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಇಂಧನ, ಕನ್ನಡ ಹಾಗೂ ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.

ವಿದ್ಯುತ್ ರಹಿತವಾದ 1.65 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಮನೆಗಳನ್ನು ಈಗಾಗಲೇ ‌ಗುರಿತಸಲಾಗಿದೆ. ಈ ಪೈಕಿ ಬೆಳಕು ಯೋಜನೆ ಅನ್ವಯ 98, 448 ಮನೆಗಳಿಗೆ ಸಂಪರ್ಕ ನೀಡಲಾಗಿದ್ದು, ಉಳಿದ ಮನೆಗಳಿಗೆ ಅತಿ ಶೀಘ್ರದಲ್ಲಿ ಸಂಪರ್ಕ ಕಲ್ಪಿಸುವುದಾಗಿ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದಾರೆ. ಬೆಳಕು ಯೋಜನೆಯ ಸಂಕಲ್ಪ ಸಿದ್ಧಿಗೆ ಇದರಿಂದ ಬಲ ಬಂದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸರಕಾರ ಎಲ್ಲ ವರ್ಗಗಳಿಗೂ ಎಲ್ಲ ಕ್ಷೇತ್ರಗಳಿಗೂ ” ಬೆಳಕು” ನೀಡುವುದಕ್ಕೆ ಮುಂದಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ, ವಿಚ್ಛೇದಿತ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಶಾಸನ ಹೆಚ್ಚಳ ಮಾಡುವ ಮೂಲಕ ಅವರ ಬದುಕಿನಲ್ಲಿ ಬೆಳಕು ಮೂಡಿಸಲಾಗಿದೆ.

ಕಾಶಿಯಾತ್ರೆಗೆ ಹೋಗುವ ಶ್ರದ್ಧಾಳುಗಳಿಗೆ 5000 ರೂ. ನೀಡಲು ಪ್ರಸ್ತಾಪಿಸಿರುವುದು, ಗೋವುಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಪುಣ್ಯಕೋಟಿ ಯೋಜನೆ ಜಾರಿ, 100 ಪಶು ಚಿಕಿತ್ಸಾಲಯ ಆರಂಭಕ್ಕೆ ನಿರ್ಅದರಿಸಿರುವುದು ಸ್ವಾಗತಾರ್ಹ. ಇದು ಸರ್ವೋದಯ ಹಾಗೂ ಕ್ಷೇಮಾಭಿವೃದ್ಧಿಯ ಗುರಿ ಹೊಂದಿರುವ ಮಾತೃ ಹೃದಯದ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ವಿದ್ಯುತ್ ಸರಬರಾಜು ನಿಗಮಗಳ ಪುನರ್ ರಚನೆ, ಆಸ್ತಿ ಗಳಿಕೆ, ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಢಿಕರಣ ಮಾಡುವ ಸಲುವಾಗಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ವಿದ್ಯುತ್ ಅಡಚಣೆ ಹೊಂದಿರುವ ೧೫ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಲಾಗಿದ್ದು ಕೆಪಿಟಿಸಿಎಲ್ ಮೂಲಕ ಪೂರೈಕೆಗೆ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ. ಇಂಧನ ಕ್ಷೇತ್ರದ ಸುಧಾರಣೆಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚಿಸಲು ಶರಾವತಿ ಸಂಕೀರ್ಣದಲ್ಲಿ ೨೦೦೦ ಮೆ.ವ್ಯಾ ಸಾಮರ್ಥ್ಯದ ಭೂಗರ್ಭ ವಿದ್ಯುತ್ ಕೇಂದ್ರ ಸ್ಥಾಪನೆಗೆ 5391ಕೋಟಿ ರೂ, ಕೆಪಿಟಿಸಿಎಲ್ ವತಿಯಿಂದ ೬೪ ಹೊಸ ಉಪಕೇಂದ್ರಗಳ ಸ್ಥಾಪನೆ, ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್ ನೀತಿಗೆ ಕೈ ಜೋಡಿಸಲು ರಾಜ್ಯ ಗ್ರೀನ್ ಹೈಡ್ರೋಜನ್ ನೀತಿ ರೂಪಿಸಲು ಪ್ರಸ್ತಾಪಿಸಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ೫೦೦೦ ಮೆಗಾ ವ್ಯಾಟ್ ಸಾಮರ್ಥ್ಯದ ಹೈಬ್ರಿಡ್ ಪಾರ್ಕ್ ಸ್ಥಾಪನೆಯ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಲು ನಿರ್ಧರಿಸಲಾಗಿದೆ. ಪಿಎಂ-ಕುಸುಮ್ ಯೋಜನೆ ಅನ್ವಯ 227 ಕೋಟಿ ರೂ.ವೆಚ್ಚದಲ್ಲಿ 10,000  ಸೌರಶಕ್ತಿ ಆಧರಿತ ನೀರಾವರಿ ಪಂಪ್ ಸೆಟ್ ಗಳನ್ನು ಕ್ರೆಡಲ್ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದು ಹೇಳಿದರು.

ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ೨೦ ಕೋಟಿ ರೂ. ಒದಗಿಸಲಾಗಿದ್ದು, ನೆರೆ ರಾಜ್ಯಗಳಲ್ಲೂ ಕನ್ನಡ ಭಾಷೆ ಹಾಗೂ ಸಂಸ್ಕ್ರತಿ ಬೆಳೆಗಿಸಲು ಕಾಸರಗೋಡಿನಲ್ಲಿ ಕೈಯ್ಯಾರ ಕಿಂಜ್ಞಣ್ಣ ರೈ ಹಾಗೂ ಅಕ್ಕಲಕೋಟೆಯಲ್ಲಿ ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಹಾಗೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ನಾಲ್ಕು ಕಡೆ ಮಹರ್ಷಿ ನಾರಾಯಣಗುರು ವಸತಿ ಶಾಲೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ನಾರಾಯಣಗುರುಗಳ ಬಗ್ಗೆ ನಮ್ಮ ಸರಕಾರ ಹಾಗೂ ಪಕ್ಷಕ್ಕೆ ಇರುವ ಗೌರವ ಎಂಥದ್ದು ಎಂಬುದು ಇದರಿಂದ ಅನಾವರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

Independent journalism can’t be independent without your support, contribute by clicking below.

Related News

LEAVE A REPLY

Please enter your comment!
Please enter your name here

Stay Connected

56,806FansLike
69,877FollowersFollow
98,755SubscribersSubscribe
- Advertisement -spot_img

State News

National News

international News

This is the title of the web page
This is the title of the web page